What’s the next move of BSNL, with loss of Rs 13,804 crore in 2018-19?
13.8 ಸಾವಿರ ಕೋಟಿ ಆರ್ಥಿಕ ನಷ್ಟ ಅನುಭವಿಸುತ್ತಿರುವ BSNL ಬಗ್ಗೆ ಕೇಂದ್ರ ಸರ್ಕಾರದ ಮುಂದಿನ ನಡೆಯೇನು?
ಒಂದು ಕಾಲದಲ್ಲಿ ಸರ್ಕಾರದ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ (PSU) ಪ್ರಮುಖವಾಗಿದ್ದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸಂಸ್ಥೆ, ಖಾಸಗಿ ಆಪರೇಟರ್ಗಳ ಸ್ಪರ್ಧೆಯಿಂದಾಗಿ ಕಳೆದ ಒಂದು ದಶಕದಿಂದ ವ್ಯಾಪರ ನಷ್ಟವನ್ನು ಅನುಭವಿಸುತ್ತಿದೆ. ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಸಾಗಲು ವಿಫಲರಾಗಿದ್ದರಿಂದ ಚಂದಾದಾರರನ್ನು ಕಳೆದುಕೊಳ್ಳಬೇಕಾಯಿತು. ಕಳಪೆ ನಿರ್ವಹಣೆಯಿಂದ ಲ್ಯಾಂಡ್ಲೈನ್ ಸಂಖ್ಯೆಗಳು ಕುಗ್ಗಲು ಪ್ರಾರಂಭಿಸಿದಾಗ ಮತ್ತು ಸಿಬ್ಬಂದಿ ನಿರ್ವಹಣೆ ವೆಚ್ಚವು ಏರಿಕೆಯಾದಾಗ, ಸರ್ಕಾರದ ಮಧ್ಯಸ್ಥಿಕೆ ಮತ್ತು ಗ್ರಾಹಕ ಸೇವೆಯಂತಹ ಋಣಾತ್ಮಕ ಅಂಶಗಳ ಮಿಶ್ರಣದಿಂದಾಗಿ ಅವುಗಳ ಕಾರ್ಯಾಚರಣೆಯನ್ನು ಹಿಂತೆಗೆದುಕೊಳ್ಳಲಾಯಿತು.
For ENGLISH content CLICK HERE.
ಸಿಬ್ಬಂದಿ ನಿರ್ವಹಣೆ ವೆಚ್ಚವು ಈ ಎರಡು ಕಂಪೆನಿಗಳ ಆದಾಯವನ್ನು ಬರಿದು ಮಾಡಿದೆ. ಜೂನ್ ನಲ್ಲಿ ತಯಾರಿಸಲಾದ ಅಧಿಕೃತ ವರದಿಯ ಪ್ರಕಾರ ಎರಡು ಕಂಪನಿಗಳ ಆದಾಯದ ಶೇಕಡಾವಾರು BSNL ಗೆ 77%, ಮತ್ತು MTNL ಗೆ 87% (2018-19 ಹಣಕಾಸು ಸಂಖ್ಯೆಗಳ ಆಧಾರದ ಮೇಲೆ) ಸಿಬ್ಬಂದಿ ವೆಚ್ಚ ತಗಲುತ್ತದೆ.
ದೆಹಲಿ ಮತ್ತು ಮುಂಬೈ ಹೊರತುಪಡಿಸಿ 2018-19ರಲ್ಲಿ BSNL ನ ನಷ್ಟ 13,804 ಕೋಟಿ ರೂಪಾಯಿ. ಎರಡು ಮೆಟ್ರೋ ಮಾರುಕಟ್ಟೆಗಳನ್ನು ಎಂಟಿಎನ್ಎಲ್ ಒಳಗೊಂಡಿದ್ದು ಅವರ ಅಂದಾಜು ನಷ್ಟವು 2018-19ರಲ್ಲಿ 3,400 ಕೋಟಿ ರೂ.
ವ್ಯಾಪಾರ ನಷ್ಟವನ್ನು ಅನುಭವಿಸುತ್ತಿರುವ ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆಗಳಾದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ಗಾಗಿ ಭಾರತ ಸರ್ಕಾರ, 23 ಅಕ್ಟೋಬರ್, 2019 ಬುಧವಾರದಂದು ಸುಮಾರು 70,000 ಕೋಟಿ ರೂ.ಗಳ ಬೃಹತ್ ಪುನರುಜ್ಜೀವನ ಪ್ಯಾಕೇಜ್ ಘೋಷಿಸಿದೆ. ನಷ್ಟವನ್ನು ಅನುಭವಿಸುತ್ತಿರುವ ಈ ಎರಡು ಕಂಪನಿಗಳು ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಕಾರ್ಯತಂತ್ರದ ಮೂಲಕ ಲಾಭದಾಯಕತೆಯನ್ನು ಪಡೆದುಕೊಳ್ಳಲು ಸಹಾಯವಾಗಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ, ಅಕ್ಟೋಬರ್ 24, 2019 ರಂದು ವರದಿ ಮಾಡಿದೆ.
ಕಂಪೆನಿಗಳಿಗೆ 4 ಜಿ ಸ್ಪೆಕ್ಟ್ರಮ್ಗೆ ಪ್ರವೇಶವನ್ನು ನೀಡುವ ಮೂಲಕ ಸ್ಪರ್ಧಾತ್ಮಕವಾಗಿಸುವುದು; ಆಕರ್ಷಕ VRS ಪ್ಯಾಕೇಜ್ ಮೂಲಕ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ನಿವೃತ್ತಿ ಮಾಡಲು ಸಹಕರಿಸಿ ಸಂಸ್ಥೆಯ ಸ್ವತ್ತುಗಳಾದ ದೊಡ್ಡ ಪ್ರಮಾಣದ ಭೂಮಿ ಮತ್ತು ಟೆಲಿಕಾಂ ಟವರ್ಗಳ ಮೂಲಕ ಆದಾಯ ಗಳಿಸುವುದು ಈ ಪುನರುಜ್ಜೀವನ ಪ್ಯಾಕೇಜ್ನ ಗುರಿಯಾಗಿದೆ.
ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಒಟ್ಟಾಗಿ ಮೊಬೈಲ್ ವ್ಯಾಪಾರ ಕ್ಷೇತ್ರದಲ್ಲಿ ಸುಮಾರು 14% ಮಾರುಕಟ್ಟೆ ಪಾಲನ್ನು ವಿಲೀನಗೊಳಿಸಲಿವೆ. ಎಂಟಿಎನ್ಎಲ್ ಒಂದು ಶೇರು ಮಾರುಕಟ್ಟೆಯಲ್ಲಿ ಗುರುತಿಸಿಕೊಂಡ ಕಂಪನಿಯಾಗಿರುವುದರಿಂದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ವಿಲೀನವು ಕೆಲವು ಕಾರ್ಯಾಚರಣೆಯ ಮತ್ತು ನಿಯಂತ್ರಕ ಸಮಸ್ಯೆಗಳಿಂದ ವಿಳಂಬವಾಗಿದೆ.
ಬೃಹತ್ ಪುನರುಜ್ಜೀವನ ಪ್ಯಾಕೇಜ್ ಮತ್ತು ಹೊಸ ಕಾರ್ಯತಂತ್ರವನ್ನು ಉದ್ದೇಶಿಸಿ ಮಾತನಾಡಿದ ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ (IT) ಸಚಿವ ರವಿಶಂಕರ್ ಪ್ರಸಾದ್ ಅವರು “ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಭಾರತದ ಸಾರ್ವಜನಿಕ ವಲಯದ ಪ್ರಮುಖ ಸಂಸ್ಥೆಗಳಾಗಿದ್ದು ಅವುಗಳನ್ನು ಮುಚ್ಚಲಾಗುವುದಿಲ್ಲ ಅಥವಾ ಯಾವುದೇ ಮೂರನೇ ವ್ಯಕ್ತಿಗೆ ವರ್ಗಾಯಿಸಲಾಗುವುದಿಲ್ಲ ” ಎಂದು ತಿಳಿಸಿದ್ದಾರೆ.
ಹೊಸ ತಂತ್ರಗಳ ಪ್ರಕಾರ ಮುಂದಿನ ವರ್ಷಗಳಲ್ಲಿ ಈ ಎರಡು ಕಂಪನಿಗಳು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಲಿವೆ ಮತ್ತು 2023 ರ ವೇಳೆಗೆ ಸಂಪೂರ್ಣ ಲಾಭದಾಯಕವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸರ್ಕಾರದ ಬದ್ಧತೆಯ ಹೊರತಾಗಿಯೂ, ಟೆಲಿಕಾಂ ಕ್ಷೇತ್ರದಲ್ಲಿನ ತೀವ್ರ ಪೈಪೋಟಿಯಿಂದಾಗಿ, ವಿಶೇಷವಾಗಿ ಸೆಪ್ಟೆಂಬರ್ 2016 ರಲ್ಲಿ ರಿಲಯನ್ಸ್ ಜಿಯೋ ಪ್ರಾರಂಭವಾದ ನಂತರ ಈ ಎರಡು ಕಂಪನಿಗಳ ಪುನರುಜ್ಜೀವನವು ಒಂದು ದೊಡ್ಡ ಸವಾಲಾಗಿದೆ.
VRS ಪ್ಯಾಕೇಜುಗಳು, ಆಸ್ತಿ ಆದಾಯ ಮತ್ತು 4 ಜಿ ಯ ಜೊತೆಗೆ ಒಂದು ಉತ್ತಮ ಕಾರ್ಯತಂತ್ರವನ್ನು ರೂಪಿಸಬೇಕಾಗುತ್ತದೆ. ಸುಮಾರು 10,000 ಕೋಟಿ ರೂ. ಹೆಚ್ಚುವರಿ ಬಂಡವಾಳವನ್ನು 4 ಜಿ ಮೂಲಸೌಕರ್ಯಕ್ಕಾಗಿ ವಿನಿಯೋಗಿಸಬೇಕಾಗಿದೆ.