For a better experience please change your browser to CHROME, FIREFOX, OPERA or Internet Explorer.
How to Avoid Financial Interruption in Difficult Times.

How to Avoid Financial Interruption in Difficult Times.

ಕಷ್ಟಕಾಲದಲ್ಲಿ ಆರ್ಥಿಕ ಅಡಚಣೆಯಿಂದ ತಪ್ಪಿಸಿಕೊಳ್ಳುವುದು ಹೇಗೆ?

ನಾವಿಂದು ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರ ಎಷ್ಟೊಂದು ಅಸುರಕ್ಶಿತ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ನಮ್ಮ ಆರೋಗ್ಯವನ್ನು ಹದೆಗೆಡಿಸಲು ರೋಗ ರುಜಿನಗಳು ನಮ್ಮ ಸನಿಹದಲ್ಲೇ ಇವೆ ಎಂಬುದು ನಮಗೆ ತಿಳಿದೇ ಇದೆ.

For ENGLISH content CLICK HERE.

ರೋಗ ರುಜಿನಗಳಿಂದ ಆರೋಗ್ಯ ಕೆಟ್ಟಾಗ ಅಥವಾ ಅಪಘಾತಗಳು ಸಂಭವಿಸಿದಾಗ ತಗಲುವ ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸುವುದು ಸುಲಭದ ವಿಷಯವಲ್ಲ.ನಾವು ಆರೋಗ್ಯ ಸಂಬಂಧಿ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ, ಹೆಚ್ಚಾಗಿ ಹೆಲ್ತ್ ಕಾರ್ಡ್ ಇದೆಯೇ? ಆರೋಗ್ಯ ವಿಮೆ ಮಾಡಿಸಿಕೊಂಡಿದ್ದೀರಾ? ಎಂದು ಸಾಮಾನ್ಯವಾಗಿ ಅಲ್ಲಿನ ಸಿಬ್ಬಂದಿ ಪ್ರಶ್ನಿಸುತ್ತಾರೆ. ಆರೋಗ್ಯ ವಿಮೆ ಮಾಡಿಸಿಕೊಂಡವರು ನೆಮ್ಮದಿಯಿಂದ ಡಿಸ್ಚಾರ್ಜ್ ಆಗಿ ಹೊರಗೆ ಬರುತ್ತಾರೆ. ಆರೋಗ್ಯ ವಿಮೆ ಮಾಡಿಸಿಕೊಳ್ಳದವರು ತಾವು ಕಷ್ಟ ಪಟ್ಟು ದುಡಿದು ಗಳಿಸಿದ ಹಣವನ್ನು ಬಿಲ್ ಕೌಂಟರ್ ನಲ್ಲಿ ಪಾವತಿಸಿ ಹೊರಗೆ ಬರುತ್ತಾರೆ.

ಬಹಳ ಜನರು ಅಂತಹ ಸಮಯದಲ್ಲಿ ತಮಗೆ ವಿಮೆಯ ಸವಲತ್ತು ಸಿಗಬಹುದೇ ಎಂದು ವಿಚಾರಿಸುವುದೂ ಇದೆ. ಆರೋಗ್ಯ ವಿಮೆ ಎಂದರೆ ನಾವು ಆರೋಗ್ಯವಾಗಿ ಇದ್ದಾಗ ಸ್ವಲ್ಪ ಹಣವನ್ನು ವಿನಿಯೋಗಿಸಿ ಆರೋಗ್ಯ ಕೆಟ್ಟಾಗ ತಗಲುವ ದೊಡ್ಡ ಮೊತ್ತದ ವೈದ್ಯಕೀಯ ವೆಚ್ಚವನ್ನು ಭರಿಸುವ ವ್ಯವಸ್ಥೆ. ಇದರಿಂದಾಗಿ ನಾವು ಆರ್ಥಿಕವಾಗಿ ನಷ್ಟ ಅನುಭವಿಸುವುದನ್ನು ತಪ್ಪಿಸಬಹುದು. ತಿಳುವಳಿಕೆ ಇಲ್ಲದವರು ಕಟ್ಟಿದ ಹಣ ವಾಪಾಸು ಬರುವುದಿಲ್ಲವೆಂದು ವಿಮೆ ಮಾಡಿಸಿಕೊಳ್ಳದೆ ಮುಂದೆ ಆರೋಗ್ಯ ಸಂಬಂಧಿ ವೆಚ್ಚಗಳಿಗೆ ಲಕ್ಷಗಟ್ಟಲೆ ಹಣವನ್ನು ತಮ್ಮ ಉಳಿತಾಯದಿಂದ ಕಳೆದುಕೊಳ್ಳುತ್ತಾರೆ.

ಆದ್ದರಿಂದ ಸಕಾಲದಲ್ಲಿ ಆರೋಗ್ಯ ವಿಮೆ ಮಾಡಿಸಿದಲ್ಲಿ ಉತ್ತಮವಾದ ಹಾಗೂ ಗುಣಮಟ್ಟದ ಚಿಕಿತ್ಸೆಯ ಜೊತೆಗೆ ನಮ್ಮ ಉಳಿತಾಯದ ಹಣ ನಮ್ಮಲ್ಲೇ ಉಳಿಯುವುದು ಮಾತ್ರವಲ್ಲದೆ ನಮ್ಮಲ್ಲಿ ಏನೂ ಉಳಿತಾಯವಿಲ್ಲದ ಪಕ್ಷದಲ್ಲಿ, ನಾವು ಆಸ್ಪತ್ರೆಯ ವೆಚ್ಚವನ್ನು ಭರಿಸುವುದಕ್ಕಾಗಿ ಸಾಲಗಾರರಾಗುವುದು ತಪ್ಪುತ್ತದೆ.

ವಿಮೆ ಎಂದ ತಕ್ಷಣ ಅದನ್ನು ತಿರಸ್ಕಾರದ ಮನೋಭಾವದಿಂದ ನೋಡುವವರೇ ಹೆಚ್ಚು ಹೊರತು ಅದರ ಮಹತ್ವದ ಬಗ್ಗೆ ತಿಳಿದುಕೊಳ್ಳುವವರು ತುಂಬಾ ವಿರಳ.

ಜೀವನದಲ್ಲಿ ನಮ್ಮ ಗುರಿಯನ್ನು ತಲುಪಲು ನಾವು ನಾನಾ ರೀತಿಯಲ್ಲಿ ಕಷ್ಟಪಡುತ್ತೇವೆ.

ಆರ್ಥಿಕವಾಗಿಯೂ ಸಬಲರಾಗಲು ಹಗಳಿರುಲು ದುಡಿಯುತ್ತೇವೆ.

ಮಕ್ಕಳ ಶಿಕ್ಷಣ, ಮದುವೆ ಸಮಾರಂಭ, ಸ್ವಂತ ಮನೆ, ಬೈಕು, – ಕಾರು, ಪ್ರವಾಸ, ಉತ್ತಮ ಸೌಕರ್ಯಗಳನ್ನು ಪಡೆಯುವ ಉದ್ದೇಶದಿಂದ ನಮ್ಮೆಲ್ಲ ಸಣ್ಣ ಪುಟ್ಟ ಆಸೆಗಳನ್ನು ಬದಿಗೊತ್ತಿ ಹಣವನ್ನು ಕೂಡಿಸಲು ಪ್ರಯತ್ನಿಸುತ್ತೇವೆ. ಇಷ್ಟು ಕಷ್ಟದಲ್ಲಿ ಕೂಡಿಟ್ಟ ಹಣ ಅಪಘಾತ ಅಥವಾ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಸುರಿಯಬೇಕಾದ ಸಂದರ್ಭ ಬಂದರೆ ಏನು ಮಾಡುತ್ತೀರಿ? ಒಂದು ವೇಳೆ ಅಪಘಾತಕ್ಕಿಡಾಗಿ ದುರ್ಮರಣ ಹೊಂದಿದರೆ ನಿಮ್ಮನ್ನು ನಂಬಿ ಸಾಗಿಸುತ್ತಿರುವ ನಿಮ್ಮ ಕುಟುಂಬದ ಸದಸ್ಯರ ಗತಿಯೇನು?

ಯಾರು ಅವರನ್ನು ಸಾಕಿ ಸಲಹುತ್ತಾರೆ?

ನಿಮ್ಮ ತಂದೆ ತಾಯಿ, ಮಕ್ಕಳು, ಗಂಡ – ಹೆಂಡತಿ, ಅಣ್ಣ-ತಮ್ಮ, ಅಕ್ಕ-ತಂಗಿ ಇನ್ನೊಬ್ಬರ ಹಂಗಿನಲ್ಲಿ ಬದುಕಬೇಕೆ?

ಸಂಪಾದಿಸಿದ ಹಣವನ್ನು ಆಸ್ಪತ್ರೆಯಲ್ಲಿ ಸುರಿಯುವುದಕ್ಕಾಗಿ ನಿಮ್ಮ ಎಲ್ಲಾ ಆಸೆಗಳನ್ನು ಬದಿಗಿಟ್ಟು ಹಗಲಿರುಳು ದುಡಿಯಬೇಕೆ?

ಈ ಎಲ್ಲಾ ಪ್ರಶ್ನೆಗಳನ್ನು ಒಮ್ಮೆ ಚಿಂತಿಸಿ ನೋಡಿ. ನಿಮಗೆ ವಿಮೆಯ ಮಹತ್ವದ ಬಗ್ಗೆ ಅರಿವಾಗುತ್ತದೆ.

ಹಾಗಾದರೆ ಇಂತಹ ಸುದಿಗ್ಧ ಪರಿಸ್ಥಿತಿಯಿಂದ ಹೊರಗೆ ಬರಲು ಸಾಧ್ಯವಿಲ್ಲವೇ?

ಖಂಡಿತವಾಗಿಯೂ ಇದೆ. ಅದೇ ಅರೋಗ್ಯ ಮತ್ತು ಅಪಘಾತ ವಿಮೆ.

ತನಗೆ ಅವಶ್ಯಕತೆ ಇದೆ, ಕಷ್ಟ ಕಾಲದಲ್ಲಿ ನನಗೆ ಸಹಾಯವಾಗುತ್ತದೆ ಎಂದು ಭಾವಿಸಿ ವಿಮೆ ಮಾಡಿಸಿಕೊಂಡವರಿಗಿಂತ, ನಾವು ವಿಮೆಯನ್ನು ಮಾಡಿದರೆ ವಿಮಾ ಕಂಪೆನಿಗೆ ಲಾಭವಾಗುತ್ತದೆ, ವಿಮೆಯ ಸಲಹೆಗಾರರಿಗೆ (Insurance Advisor) ಕಮಿಷನ್ ಸಿಗುತ್ತದೆ ಎಂಬ ಕಾರಣಕ್ಕಾಗಿ ವಿಮೆ ಮಾಡಿಸಿಕೊಳ್ಳದವರೇ ನಮ್ಮಲ್ಲಿ ಹೆಚ್ಚು. ಈ ಎಲ್ಲಾ ಯೋಚನೆಗಳು ದಡ್ಡರ ಲಕ್ಷಣ. ಕೆಲಸ ಮಾಡಿದವರಿಗೆ ತಕ್ಕ ವೇತನ ನೀಡುವುದು ನಮ್ಮ ಜಗತ್ತಿನ ನಿಯಮ. ಎಲ್ಲಾವನ್ನು ಬಿಟ್ಟಿಯಾಗಿ ಪಡೆಯಬೇಕೆಂಬ ಆಸೆಯನ್ನು ಬಿಟ್ಟುಬಿಡೋಣ.

ಸರಕಾರ ನಮಗೆ ಸವಲತ್ತುಗಳನ್ನು ನೀಡಬೇಕು, ನಮ್ಮ ಕುಟುಂಬದವರು ನಮಗೆ ಸಹಾಯ ಮಾಡಬೇಕು ಎಂಬ ಭ್ರಮೆಯಿಂದ ಹೊರಗೆ ಬರೋಣ. ಎಲ್ಲರಿಗೂ ಅವರವರ ವೈಯುಕ್ತಿಕ ಜೀವನ ಹಾಗೂ ಕುಟುಂಬ ನಿರ್ವಹಣೆಯ ಬದ್ದಗಳಿವೆ.

ಹೀಗಿರುವಾಗ ಇತರರು ನಮಗಾಗಿ ಎಷ್ಟು ಕಾಲ ಖರ್ಚು ಮಾಡಬಹುದು?

ನಾವು ಇತರರಿಗೆ ಎಷ್ಟು ಸಹಾಯ ಮಾಡಿದ್ದೇವೆ ಎಂದು ಒಮ್ಮೆ ಪ್ರಶ್ನಿಸಿಕೊಳ್ಳೋಣ.

ವಿಮೆ ಮಾಡಿಸಿಕೊಳ್ಳಲು ನನ್ನಲ್ಲಿ ಹಣವಿಲ್ಲ ಎಂದು ಕೆಲವರ ವಾದ.

ಇಂದು ವಿಮೆ ಮಾಡಿಸಿಕೊಳ್ಳಲು ಹಣವಿಲ್ಲ ಎಂದು ಅಸಡ್ಡೆ ತೋರಿದರೆ, ಮುಂದೆ ಅನಾಹುತ- ಅನಾರೋಗ್ಯದಿಂದಾಗಿ ಲಕ್ಷಗಟ್ಟಲೆ ಹಣ ಹೊಂದಿಸಬೇಕಾದ ಪರಿಸ್ಥಿತಿ ಎದುರಾದರೆ ಏನು ಮಾಡುತ್ತೀರಿ?

ಆದ್ದರಿಂದ ಇಂದೇ ಜಾಗ್ರತರಾಗಿ.

ಅನಾರೋಗ್ಯ ಅಥವಾ ಅಪಘಾತ ಇದನ್ನು ತಡೆಯಲು ನಮ್ಮಿಂದ ಸಾಧ್ಯವಾಗದು, ಆದರೆ ಅದನ್ನು ಎದುರಿಸಲು ಸಿದ್ದರಾಗುವುದು ಖಂಡಿತ ಸಾಧ್ಯ.
ಕಷ್ಟಕಾಲದಲ್ಲಿ ಆರ್ಥಿಕ ಅಡಚಣೆಯಿಂದ ತಪ್ಪಿಸಿಕೊಳ್ಳಲು , ಕಷ್ಟಪಟ್ಟು ಸಂಪಾದಿಸಿದ ಹಣ ಅನಾರೋಗ್ಯ ಅಥವಾ ಅಪಘಾತದಿಂದ ಪೋಲಾಗಿ ಹೋಗುವುದನ್ನು ತಪ್ಪಿಸಲು ಇಂದೇ ಜಾಗ್ರತರಾಗಿ.

ESI ಅಥವಾ ತತ್ಸಮಾನ ಆರೋಗ್ಯ ವಿಮೆ ಇದ್ದವರು ಲಕ್ಷಕ್ಕೆ ಕೇವಲ ರೂ. 70* ರ ಮೂಲಕ ತಮ್ಮ ಕುಟುಂಬದವರಿಗೆ ಪರಿಹಾರ ಧನ ಸಿಗುವಂತೆ ಮಾಡಿಕೊಳ್ಳಬಹುದು.

ನಿಮ್ಮ ಹಾಗೂ ಕುಟುಂಬದ ಸುರಕ್ಷತೆ ಈಗ ಕೇವಲ ರೂ. 70* ರಿಂದ ಪ್ರಾರಂಭ.

ನಗದು ರಹಿತ ಉತ್ತಮ ವೈದ್ಯಕೀಯ ಸೇವೆಯ ಜೊತೆಗೆ ಕುಟುಂಬಕ್ಕೆ ಸೂಕ್ತ ಪರಿಹಾರ ಧನ.

ಸಂಪೂರ್ಣ ಅಂಗವೈಫಲ್ಯಕ್ಕೆ ಶೇಕಡಾ 150 ರಷ್ಟು ಪರಿಹಾರ ಧನ ಲಭ್ಯ.

Talk to the experts today. Clarify your doubts. Find out the best deals to protect your family.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8660117592

1 2

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts