Don’t make this one mistake in 2020!!
2020 ರಲ್ಲಿ ತಪ್ಪಿಯೂ ಕೂಡಾ ಈ ಒಂದು ತಪ್ಪನ್ನು ಮಾಡಿ ಪರಿತಪಿಸದಿರಿ!
ಹೊಸ ವರುಷ ಸಮೀಪಿಸುತ್ತಿದೆ, ಹೊಸ ಹರುಷ ತುಂಬುತ್ತಿದೆ. ನೂರಾರು ಕನಸುಗಳನ್ನೊತ್ತ ಮನಸ್ಸು ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಕಾಯುತ್ತಿದೆ. ಹೌದು 2019 ನೇ ಇಸವಿಗೆ ವಿದಾಯ ಕೋರಿ 2020 ರ ವರುಷಕ್ಕೆ ಪಾದಾರ್ಪಣೆ ಮಾಡುವ ಸಮಯ ಬಂದಿದೆ.
For ENGLISH content CLICK HERE.
ನಮಗೆಲ್ಲರಿಗೂ ತಿಳಿದಿರುವ ಹಾಗೆ ಹೊಸ ವರುಷದ ಪ್ರಾರಂಭದಲ್ಲಿ ನಾವು ಹಲವಾರು ದಿನಾಂಕವನ್ನು ನಮೂದಿಸುವಾಗ ಹಿಂದಿನ ವರ್ಷವನ್ನೇ ಬರೆಯುವ ತಪ್ಪನ್ನು ಮಾಡುತ್ತೇವೆ. ಆದರೆ ನಾವು ಹೇಳಲು ಹೊರಡಿರುವ ಈ ಒಂದು ತಪ್ಪು ನಿಮ್ಮನ್ನು ಜೀವನ ಪರ್ಯಾಂತ ಪರಿತಪಿಸುವಂತೆ ಮಾಡಬಹುದು.
ಸಾಮಾನ್ಯವಾಗಿ ದಿನಾಂಕವನ್ನು ಬರೆಯುವಾಗ ಇಸವಿಯ ಕೊನೆಯ 2 ಅಂಕಿಗಳನ್ನು ಮಾತ್ರ ನಮೂದಿಸುವ ರೂಡಿ ನಮ್ಮಲ್ಲಿ ಹಲವರಲ್ಲಿ ಇದೆ. ಉದಾ: ಜನವರಿ 01, 2019 ನ್ನು 01/01/19 ಎಂದು ನಮೂದಿಸುತ್ತೇವೆ. ಆದರೆ ಈ ವಿಧಾನವನ್ನು 2020 ರಲ್ಲಿ ಬಳಸದಿರಿ. ಏಕೆಂದರೆ ನೀವು ಕೇವಲ 01/01/20 ಎಂದು ಬರೆದರೆ ಅದರ ನಂತರದಲ್ಲಿ ಅದನ್ನು ದುರುದ್ದೇಶದಿಂದ ಬಳಸಿಕೊಳ್ಳುವವರು ಅವರವರ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಬಹುದು.
ಉದಾಹರಣೆಗೆ ನೀವು ಬರೆದ 01/01/20 ನ್ನು 01/01/2019 ಅಥವಾ ಅವರವರ ಅನುಕೂಲಕ್ಕೆ ಬೇಕಾದಂತೆ ಸೇರಿಸಿಕೊಳ್ಳಬಹುದು. ಆದ್ದರಿಂದ ಜಾಗರೂಕರಾಗಿ ಹೊಸ ವರುಷವನ್ನು ಸ್ವಾಗತಿಸಿ ದಿನಾಂಕ ನಮೂದಿಸುವಾಗ ವರ್ಷದಲ್ಲಿನ ಎಲ್ಲಾ 4 ಅಂಕಿಗಳನ್ನು ತಪ್ಪದೇ ಬರೆಯಿರಿ. 2020 ರ ವರ್ಷವನ್ನು ಕೇವಲ 20 ಎಂದು ನಮೂದಿಸಿರುವ ದಾಖಲೆಗಳನ್ನು ಸ್ವೀಕರಿಸಬೇಡಿ.
ಈ ಮಾಹಿತಿಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ ಸಮಾಜದಲ್ಲಿ ಜಾಗೃತಿ ಮೂಡಿಸಿ.