Pradhan Mantri Kisan Samman Nidhi Scheme.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ.
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಡಿಸೆಂಬರ್ 1, 2018 ರಂದು ಜಾರಿಗೆ ತಂದರು.
ಅರ್ಹ ರೈತರಿಗೆ ತಮ್ಮ ಕೃಷಿ ಅವಶ್ಯಕತೆಗಳನ್ನು ಪೂರೈಸಲು ಹಾಗೂ ಅವರ ಕುಟುಂಬ ಮತ್ತು ಆದಾಯಕ್ಕೆ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆ ಮೂಲಕ ಬರುವ ಹಣ ಫಲಾನುಭವಿಯ ಬ್ಯಾಂಕ್ ಖಾತೆಗೆ ಯಾವುದೇ ಮಧ್ಯವರ್ತಿಯ ಸಹಾಯ ಇಲ್ಲದೆ ನೇರವಾಗಿ ವರ್ಗಾವಣೆ ಆಗುತ್ತದೆ. ಆದ್ದರಿಂದ ದೇಶದ ಕೋಟ್ಯಾಂತರ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು.
ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳು
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ 6,000 ರೂಪಾಯಿಗಳ ಆರ್ಥಿಕ ನೆರವನ್ನು 3 ಕಂತುಗಳಲ್ಲಿ ರೂ. ತಲಾ 2,000 ರೂ. ನಂತೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು?
- ನಗರ ಮತ್ತು ಗ್ರಾಮೀಣ ಪ್ರದೇಶದ ರೈತರು.
- ಭೂ ದಾಖಲೆ ಹೊಂದಿರುವ ರೈತರು ಅಥವಾ ಬೇಸಾಯ ಮಾಡುವ ರೈತರು
- ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಕುಟುಂಬಗಳು.
ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರಲ್ಲ
- ಸಾಂಸ್ಥಿಕ ಭೂಮಾಲೀಕರು ಅಥವಾ ರೈತರು.
- ಹೆಚ್ಚಿನ ಆರ್ಥಿಕ ಸ್ಥಾನಮಾನ ಹೊಂದಿರುವ ಜನರು.
- ಆದಾಯ ತೆರಿಗೆ ಪಾವತಿಸುವವರು. ಸರಕಾರಿ ಹುದ್ದೆಗಳನ್ನು ಹೊಂದಿರುವ ರೈತ ಕುಟುಂಬಗಳು.
- ರಾಜ್ಯ / ಕೇಂದ್ರ ಸರ್ಕಾರದ ನೌಕರರು, ಪ್ರಸ್ತುತ ಅಥವಾ ನಿವೃತ್ತ ಅಧಿಕಾರಿಗಳು, ಹಾಗೆಯೇ ಪಿಎಸ್ಯುಗಳು ಮತ್ತು ಸ್ವಾಯತ್ತ ಸಂಸ್ಥೆಗಳ ನೌಕರರು.
- ವೈದ್ಯರು, ಎಂಜಿನಿಯರ್‌ಗಳು ಮತ್ತು ವಕೀಲರಂತಹ ವೃತ್ತಿಪರರು.
- ರೂ. 10,000 ಕ್ಕಿಂತ ಅಧಿಕ ಮಾಸಿಕ ಪಿಂಚಣಿ ಪಡೆಯುತ್ತಿರುವ ನಿವೃತ್ತ ಪಿಂಚಣಿದಾರರು.
ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿಸಲು ಬೇಕಾದ ಅಗತ್ಯವಾದ ದಾಖಲೆಗಳು:
- ಆಧಾರ್ ಕಡ್ಡಾಯ
- ಪೌರತ್ವ ಪ್ರಮಾಣಪತ್ರ
- ಜಮೀನು ಪತ್ರಿಕೆಗಳು (RTC) ·
- ಬ್ಯಾಂಕ್ ಖಾತೆ ವಿವರಗಳು
ಅಪ್ಲಿಕೇಶನ್ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ:
ಫೋಬ್ಜಾ ಆನ್-ಲೈನ್ ಸರ್ವಿಸ್ ಸೆಂಟರ್, 2 ನೇ ಮಹಡಿ, ವಾಸುದೇವ ಪ್ಲಾಜಾ, ಸರ್ವಿಸ್ ಬಸ್ ನಿಲ್ದಾಣದ ಹತ್ತಿ,ಬಿ.ಸಿ.ರೋಡ್ -574219
+91 9449956744( Call/ Whatsapp)
ಈ ಸೇವೆಗಾಗಿ ನಮ್ಮ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ. ವಾಟ್ಸಾಪ್ ಮೂಲಕ ದಾಖಲೆಗಳನ್ನು ಕಳುಹಿಸಿ.