1-week Lockdown in Dakshina Kannada from Wednesday, 8 PM.
ಜುಲೈ 15, ರಾತ್ರಿ 8 ರಿಂದ ದಕ್ಷಿಣ ಕನ್ನಡದಲ್ಲಿ 1 ವಾರದ ಲಾಕ್‌ಡೌನ್.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೋನಾ ಸೋಂಕು ಹೆಚ್ಚಳವಾಗಿರುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಮುಖ್ಯಮಂತ್ರಿ ಶ್ರೀ ಬಿ,ಎಸ್.ಯಡಿಯೂರಪ್ಪ ರವರ ನಿರ್ದೇಶನದಂತೆ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜುಲಾಯ್ 15, 2020 ಗುರುವಾರ ರಾತ್ರಿ 8 ದಿಂದ ಮುಂದಿನ 1 ವಾರ ಕಾಲ ಲಾಕ್-ಡೌನ್ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವೇಗವಾಗಿ ಹಬ್ಬುತ್ತಿರುವ ಕೊರೋನಾ ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ ಲಾಕ್-ಡೌನ್ ನಿರ್ಧಾರವನ್ನು ತೆಗೆದುಕೊಂಡಿದ್ದು ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರೊಂದಿಗೆ ಸ್ಥಳೀಯ ಹಾಗೂ ಜಿಲ್ಲಾಡಳಿತದ ಜೊತೆಗೆ ಸಹಕರಿಸಲು ವಿನಂತಿಸಲಾಗಿದೆ.
ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆಗಳು ಬುಧವಾರದ ವರೆಗೆ ನಡೆಯುತ್ತಿರುವುದರಿಂದ ಸಾರ್ವಜನಿಕರು ದಿನಬಳಕೆಯ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ. 1 ವಾರಗಳ ಕಾಲ ನಡೆಯಲಿರುವ ಲಾಕ್-ಡೌನ್ ಬಗ್ಗೆ ಮಾರ್ಗಸೂಚಿ ಹಾಗೂ ನಿಯಮಗಳನ್ನು ದ.ಕ ಜಿಲ್ಲಾಧಿಕಾರಿ ಶ್ರೀಮತಿ ಸಿಂಧು ಬಿ ರೂಪೇಶ್ ಶೀಘ್ರದಲ್ಲಿ ಪ್ರಕಟಿಸಲಿದ್ದಾರೆ.
- HDFC Scholarship up to Rs.75,000. Last date extended to October 15, 2022.
- HDFC Scholarships for all students. Last date is 31-08-2022
- July 15, 2022 Is The Last Date For Subsidy And Loan Scheme From Karnataka Minorities Development Corporation Limited. ಅಲ್ಪಸಂಖ್ಯಾತರ ಸಹಾಯಧನ ಹಾಗೂ ಸಾಲ ಯೋಜನೆಗಳಿಗೆ ಜುಲೈ 15, 2022 ಕೊನೇಯ ದಿನ.