Public issues reappeared at B.C.Road – Bantwal.
ಬಂಟ್ವಾಳ – ಬಿ.ಸಿ.ರೋಡ್ ನಲ್ಲಿ ಮತ್ತೆ ಕಾಣಿಸಿಕೊಂಡ ಸಮಸ್ಯೆಗಳು.
ಬಂಟ್ವಾಳದ ಹೃದಯಭಾಗವಾದ ಬಿ.ಸಿ.ರೋಡ್ ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ಮತ್ತು ರಸ್ತೆ ಕಾಮಗಾರಿಯ ಕಾರಣಗಳಿಂದಾಗಿ ಪ್ರತಿ ವರ್ಷವೂ ಸುದ್ದಿಯಾಗುತ್ತಿದೆ.
For ENGLISH content CLICK HERE.
ರಾಷ್ಟ್ರೀಯ ಹೆದ್ದಾರಿ “NH-75” ಬಿ.ಸಿ.ರೋಡ್ ನಗರದಿಂದ ಹಾದು ಹೋಗುತ್ತಿದ್ದು ವಾಹನ ದಟ್ಟನೆಯಿಂದಾಗಿ ರಸ್ತೆ ಪ್ರತೀ ಬಾರಿ ಹದಗೆಡುತ್ತಿದೆ. ಪ್ರತೀ ವರ್ಷದಂತೆ ಕಳೆದ ಬಾರಿಯೂ ಸಂಪೂರ್ಣವಾಗಿ ದುರಸ್ತಿಗೊಳಿಸಲಾಗಿದ್ದ ರಸ್ತೆಯಲ್ಲಿ ಈಗ ಮತ್ತೆ ಸಣ್ಣಪುಟ್ಟ ಹೊಂಡಗಳು ಎದ್ದು ಕಾಣತೊಡಗಿದೆ.
ರಸ್ತೆಯ ಪರಿಸ್ಥಿತಿ ಇನ್ನೂ ಹದಗೆಟ್ಟು ವಾಹನ ಸಂಚಾರಕ್ಕೆ ಅನಾನುಕೂಲವಾಗುವ ಮೊದಲು ಸಂಬಂಧಪಟ್ಟವರು ಇದರ ಬಗ್ಗೆ ಗಮನಹರಿಸಿ ರಸ್ತೆಯನ್ನು ದುರಸ್ತಿಗೊಳಿಸಬೇಕಾಗಿದೆ.
ಹಲವಾರು ವಾಣೀಜ್ಯ ಸಂಕೀರ್ಣಗಳು, ಸಿಟಿ ಬಸ್ ಸ್ಟ್ಯಾಂಡ್, ಮಿನಿ ವಿಧಾನ ಸೌಧ, APMC, MESCOM, ಸರಕಾರಿ ಬಸ್ ನಿಲ್ದಾಣ, ಆಸ್ಪತ್ರೆಗಳು ಮತ್ತು ಹಲವಾರು ಸರಕಾರಿ ಕಚೇರಿಗಳನ್ನು ಹೊಂದಿರುವ ಬಿ.ಸಿ.ರೋಡ್ ಪ್ರಗತಿಯತ್ತ ಸಾಗುತ್ತಿದೆ. ಇದರಿಂದಾಗಿ ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ದೊಡ್ದ ತಲೆನೋವಾಗಿ ಪರಿಣಮಿಸಿದೆ. ರಾಷ್ಟ್ರೀಯ ಹೆದ್ದಾರಿ 75 ಬಿ.ಸಿ.ರೋಡ್ ನಗರದಿಂದಲೇ ಹಾದು ಹೋಗುತ್ತಿದ್ದು ಪ್ರಸ್ತುತ ಇರುವ ಫ್ಲೈ ಓವರ್ ಕೆಳಭಾಗದಲ್ಲಿ ನಗರಕ್ಕೆ ಆಗಮಿಸುವ ಸಾರ್ವಜನಿಕರು ಪಾರ್ಕಿಂಗ್ ಮಾಡಬೇಕಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾನೂನಿನ ಪ್ರಕಾರ ಫ್ಲೈ ಓವರ್ ಕೆಳಭಾಗದಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ. ಆದರೆ ಪ್ರಸ್ತುತ ಇರುವ ಪರಿಸ್ಥಿತಿಗೆ ವಾಹನಗಳಲ್ಲಿ ಬರುವ ಗ್ರಾಹಕರು ಫ್ಲೈ ಓವರ್ ಕೆಳಭಾಗದಲ್ಲಿ ವಾಹನ ನಿಲುಗಡೆ ಮಾಡುವುದು ಅನಿವಾರ್ಯವಾಗಿತ್ತು. ಪ್ರಸ್ತುತ ಈ ಸ್ಥಳವನ್ನೂ ಕೂಡಾ ಟ್ಯಾಕ್ಸಿ ಚಾಲಕರು ಆಕ್ರಮಿಸಿಕೊಂಡಿದ್ದು ಇದು ತಾಲೂಕು ಪಂಚಾಯಿತಿಯಿಂದ ನಮಗಾಗಿ ಮೀಸಲಿರಿಸಿದ ಜಾಗ. ಈ ಸ್ಥಳವನ್ನು ನಾವು ಪಾಲಿಕೆಗೆ ಟ್ಯಾಕ್ಸ್ ಪಾವತಿಸಿ ಉಪಯೋಗಿಸುತ್ತಿದ್ದೇವೆ. ಸಾರ್ವಜನಿಕರ ವಾಹನ ಇಲ್ಲಿ ನಿಷೇಧಿಸಿದೆ ಎಂದು ಸಾರ್ವಜನಿಕರ ವಾಹನ ನಿಲುಗಡೆಯನ್ನು ತಡೆಯಿತ್ತಿದ್ದಾರೆ. ಇದರಿಂದಾಗಿ ಬಿ.ಸಿ.ರೋಡ್ ಬಸ್ ಸ್ಟ್ಯಾಂಡ್, ವಾಸುದೇವ ಪ್ಲಾಜಾ ಸೇರಿದಂತೆ ಸುತ್ತ ಮುತ್ತಲಿನಲ್ಲಿರುವ ಬಹುತೇಕ ಉದ್ಯಮಗಳು ತಮ್ಮ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ.
ಟ್ಯಾಕ್ಸಿ ಚಾಲಕರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಪಾಲಿಕೆ ಮಾಡಿಕೊಟ್ಟಿದ್ದರೂ ಕೆಲವೊಂದು ಟ್ಯಾಕ್ಸಿ ಚಾಲಕರ ವರ್ತನೆ ಸಾರ್ವಜನಿಕರಿಗೆ ತೊಂದರೆಯನ್ನು ಉಂಟು ಮಾಡಿದೆ. ಈ ಬಗ್ಗೆಯೂ ಕೂಡಾ ಸಂಬಂಧಪಟ್ಟವರು ಕಾಳಜಿವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.