Karnataka: One week state-wide bandh to prevent the deadly coronavirus spread.
ಕೊರೊನಾ ತಡೆಗಟ್ಟಲು ಒಂದು ವಾರ ಕರ್ನಾಟಕ ಬಂದ್ !
ಮಂಗಳವಾರ ರಾತ್ರಿ ಕಲಬುರ್ಗಿಯಲ್ಲಿ 76 ವರ್ಷದ ವೃದ್ದರೊಬ್ಬರು ಮೃತಪಟ್ಟಿರುವುದು ಸೇರಿದಂತೆ ಕರ್ನಾಟಕದಲ್ಲಿ ದೃಢಪಟ್ಟ ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.
For English content CLICK HERE
ರಾಜ್ಯದಲ್ಲಿ ಹಬ್ಬುತ್ತಿರುವ ಕರೋನಾ ಮಹಾಮಾರಿಯನ್ನು ತಡೆಗಟ್ಟುವ ಉದ್ದೇಶದಿಂದ ನಾಳೆಯಿಂದ (ಶನಿವಾರ 14/03/2020) ಒಂದು ವಾರ ರಾಜ್ಯಾದಂತ ಮಾಲ್, ಚಿತ್ರಮಂದಿರ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಮದುವೆ ಸಮಾರಂಭ ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಶುಕ್ರವಾರ ರಾಜ್ಯ ಸರಕಾರ ತುರ್ತು ಆದೇಶವನ್ನು ಹೊರಡಿಸಿದೆ.
ಒಂದು ವಾರದ ನಂತರ ಪರಿಸ್ಥಿಯನ್ನು ಗಮನಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ಒಂದು ವಾರಗಳ ಕಾಲ ಮಾಲ್, ಚಿತ್ರಮಂದಿರ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಕ್ರೀಡಾಕಾರ್ಯಕ್ರಮ, ಮದುವೆ – ನಿಶ್ಚಿತಾರ್ಥ, ಜಾತ್ರೆ-ಮೇಳ, ನೈಟ್ ಕ್ಲಬ್, ಪಬ್ ಇತ್ಯಾದಿಗಳನ್ನು ತುರ್ತು ಕಾರಣದಿಂದಾಗಿ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಯಸ್. ಯಡಿಯೂರಪ್ಪ ತಿಳಿಸಿದ್ದಾರೆ.