The suicide of a father and son based in Shambur. Detection of car and death note at Netravati Bridge.
ಶಂಭೂರು ಮೂಲದ ತಂದೆ ,ಮಗನ ಆತ್ಮಹತ್ಯೆ. ನೇತ್ರಾವತಿ ಸೇತುವೆಯಲ್ಲಿ ಕಾರು ಮತ್ತು ಡೆತ್ ನೋಟ್ ಪತ್ತೆ.
ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಶಂಭೂರು ಚರ್ಚ್ ಬಳಿಯ ನಿವಾಸಿ 52 ವರ್ಷದ ಗೋಪಾಲಕೃಷ್ಣ ರೈ ತಮ್ಮ 5 ವರ್ಷದ ಮಗ ನಮೀಶ್ ಜೊತೆ ನಾಪತ್ತೆಯಾಗಿದ್ದು ತೊಕ್ಕೊಟ್ಟು ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾದ ಅವರ ಕಾರು ಮತ್ತು ಡೆತ್ ನೋಟ್ ತಂದೆ – ಮಗ ಆತ್ಮಹತ್ಯೆ ಗೈದಿರುವುದನ್ನು ಖಚಿತಪಡಿಸಿದೆ.
For ENGLISH content CLICK HERE.
ಇತ್ತೀಚಿಗಷ್ಟೇ ತಮ್ಮ ಊರಿನಲ್ಲಿ ಶಂಭೂರು ಚರ್ಚ್ ಬಳಿ ಸರಿಸುಮಾರು 2 ಕೋಟಿ ಮೊತ್ತದ ಭವ್ಯ ಮನೆಯನ್ನು ನಿರ್ಮಿಸಿದ ಗೋಪಾಲಕೃಷ್ಣ ರೈ ಎಂಬುವವರು ಮುಂಬೈಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದು ಇವರು ತನ್ನ ಪತ್ನಿ ಅಶ್ವಿನಿ ರೈ ಮತ್ತು ಮಗ ನಮೀಶ್ ಜೊತೆಗೆ ವಾಸವಾಗಿದ್ದರು.
ಬಂಟ್ವಾಳ ಶಂಭೂರು ಚರ್ಚ್ ಬಳಿ ಸರಿ –ಸುಮಾರು 2 ಕೋಟಿ ಮೌಲ್ಯದ ಭವ್ಯ ಮನೆಯನ್ನು ನಿರ್ಮಿಸಿದ ಇವರು 26 ಎಪ್ರಿಲ್ 2019 ರಂದು ಗೃಹ ಪ್ರವೇಶ ಹಾಗೂ ತದ ನಂತರ ಕೆಲವೇ ತಿಂಗಳಲ್ಲಿ ತಮ್ಮ ಮಗ ನಮೀಶ್ ಇವರ 5 ವರ್ಷದ ಹುಟ್ಟು ಹಬ್ಬವನ್ನು ತಮ್ಮ ಊರಿನಲ್ಲಿಯೇ ಅದ್ದೂರಿಯಾಗಿ ಆಚರಿಸಿದ್ದರು.
ಫೆಬ್ರವರಿ 14 ರಂದು ಮುಂಬೈಯಿಂದ ಊರಿಗೆ ಆಗಮಿಸಿದ ಇವರು ತನ್ನ ಪತ್ನಿಯ ಊರಿನ ಕೊಣಾಜೆ ಸಮೀಪದ ಪಾವೂರು ದೆಬ್ಬೇಲಿಯಲ್ಲಿ ನಡೆದ ನೇಮೋತ್ಸವಕ್ಕೆ ಫೆ:15 ರಂದು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ರಾತ್ರಿ 1 ಗಂಟೆಯವರೆಗೂ ನೇಮ ನಡೆಯುತ್ತಿದ್ದು ಸ್ಠಳದಲ್ಲಿ ಇದ್ದ ಇವರು ನಿದ್ರೆಗೆ ಜಾರಿದ ಪುತ್ರನನ್ನು ಪತ್ನಿಯ ಮನೆಗೆ ಕರೆದೊಯ್ಯುವುದಾಗಿ ತೆರಳಿದ್ದರು. ಪತ್ನಿಯ ಮನೆ ತಲುಪಿದಾಗ ಪುತ್ರ ನಮೀಶ್ ಅಳಲು ಆರಂಭಿಸಿದಾಗ, ಪತ್ನಿಗೆ ಕರೆಮಾಡಿ ನೇಮ ನಡೆಯುತ್ತಿದ್ದ ಭಾಗಕ್ಕೆ ನಮೀಶ್ ನನ್ನು ಮರಳಿ ಕರೆದು ತರುವುದಾಗಿ ತಿಳಿಸಿದ್ದರು.ಕರೆ ಮಾಡಿ ಗಂಟೆಗಳು ಕಳೆದರೂ ಪುತ್ರ ಮತ್ತು ಪತಿ ಬಾರದೇ ಇದ್ದಾಗ ಗಾಬರಿಗೊಂಡ ಪತ್ನಿ ಅಶ್ವಿನಿ ರೈ ಪತಿ ಗೋಪಾಲಕೃಷ್ಣ ರೈ ಇವರಿಗೆ ಕರೆ ಮಾಡಿದ್ದಾರೆ. ಪತಿಗೆ ನಿರಂತರವಾಗಿ ದೂರವಾಣಿ ಕರೆ ಮಾಡಿದರೂ ಸ್ವೀಕರಿಸದೇ ಇದ್ದಾಗ ಬೆಳಗ್ಗಿನ ಜಾವ 4 ರಿಂದ 5 ಗಂಟೆಯವರೆಗೆ ಗೋಪಾಲಕೃಷ್ಣ ರೈ ಹಾಗೂ ಮನೀಶ್ ಗಾಗಿ ಹುಡುಕಾಡಿದ ಅಶ್ವಿನಿ ರೈ ಮತ್ತು ಅವರ ಕುಟುಂಬಸ್ಥರು ತದನಂತರ ಕೋಣಾಜೆ ಪೋಲಿಸ್ ಠಾಣೆಗೆ ತೆರಳಿ ನಾಪತ್ತೆ ದೂರು ನೀಡಿದ್ದರು.
ಸಂಚಾರಿ ಪೋಲಿಸರು ಬೆಳಗ್ಗಿನ ಜಾವ ಹೆದ್ದಾರಿಯಲ್ಲಿ ಗಸ್ತು ತಿರುಗಾಡುತ್ತಿದ್ದಾಗ ತೊಕ್ಕೊಟ್ಟು ಬಳಿಯ ನೇತ್ರಾವತಿ ಸೇತುವೆಯ ಮೇಲೆ ಕಾರಿನ ಗ್ಲಾಸ್ ಹಾಕದೇ ನಿಂತಿದ್ದ ಕಾರನ್ನು ಪೋಲಿಸರು ಪರಿಶೀಲಿಸಿದಾಗ ಕಾರಿನಲ್ಲಿ ಅರ್ಧ ಕುಡಿದ ಮದ್ಯದ ಬಾಟಲಿ, ಮೊಬೈಲ್ ಫೋನ್, ಮಗುವಿನ ಚಪ್ಪಲಿ ಮತ್ತು ಡ್ಯಾಶ್-ಬೋರ್ಡ್ ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ತಕ್ಷಣ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿದ ಪೋಲಿಸರು, ಕೋಣಾಜೆ ಪೋಲಿಸ್ ಠಾಣೆಯಲ್ಲಿ ದಾಖಲಾದ ನಾಪತ್ತೆ ದೂರಿನ ಆಧಾರದಲ್ಲಿ ಅಶ್ವಿನಿ ರೈ ಅವರನ್ನು ನೇತ್ರಾವತಿ ಸೇತುವೆಗೆ ಕರೆಸಿದ್ದರು
ತಿಮ್ಮಪ್ಪ ರೈ ಎಂಬವರಿಗೆ ಸೇರಿದ್ದ ಕಾರನ್ನು ಬಳಸಿದ್ದ ಗೋಪಾಲಕೃಷ್ಣ ರೈ ಅವರ ಕಾರು ತಮ್ಮದೇ ಎಂದು ಅವರ ಪತ್ನಿ ಮತ್ತು ಮನೆಯವರು ಖಚಿತ ಪಡಿಸಿದ ತಕ್ಷಣ ಮಂಗಳೂರು ನಗರ ಪೋಲಿಸರು ಸ್ಥಳಕ್ಕೆ ಆಗಮಿಸಿ ಮೀನುಗಾರರ ಹಾಗೂ ಸ್ಥಳೀಯರ ಸಹಾಯದಿಂದ ಹುಡುಕಾಟ ನಡೆಸಿದರೂ ಈ ವರೆಗೆ ಗೋಪಾಲಕೃಷ್ಣ ರೈ ಹಾಗೂ ಅವರ ಪುತ್ರನ ದೇಹ ಪತ್ತೆಯಾಗಿಲ್ಲ.
“ಪುತ್ರನನ್ನು ಕೊಂದಂತ ತಾನು ಕ್ರೂರಿ ಹಾಗೂ ಮಹಾ ಪಾಪಿ. ಹೆತ್ತವರಿಗೆ ಒಳ್ಳೆಯ ಮಗನಾದೆ, ಸಹೋದರ- ಸಹೋದರಿಯರಿಗೆ ಉತ್ತಮ ಸಹೋದರನಾದೆ ಆದರೆ ಪತ್ನಿಗೆ ಉತ್ತಮ ಪತಿಯಾಗಲು ನನ್ನಿಂದ ಆಗಲಿಲ್ಲ. ನನ್ನ ಎಲ್ಲಾ ಆಸ್ತಿ ನನ್ನ ತಮ್ಮನಿಗೆ ಸೇರಲಿ. ನನ್ನ ಪತ್ನಿ ತನ್ನ ಸಹೋದರನ ಪುತ್ರನನ್ನು ಸ್ವಂತ ಪುತ್ರನಂತೆ ನೋಡಿಕೊಳ್ಳಲಿ, ಅವಳು ಚಿಂತೆಯಿಲ್ಲದೆ ಮುಂದಿನ ಬಾಳ್ವೆಯನ್ನು ನಡೆಸಬೇಕು ಎಂದು ತನ್ನ ಡೆತ್-ನೋಟಿನಲ್ಲಿ ಬರೆದ ಗೋಪಾಲಕೃಷ್ಣ ರೈ ಯಾವ ಕಾರಣಕ್ಕೆ ಆತ್ಮಹತ್ಯೆಗೈಯಿರುವುದಾಗಿ ನಿಖರವಾಗಿ ತಿಳಿಸಿಲ್ಲ.
ಉತ್ತಮ ವ್ಯವಹಾರದೊಂದಿಗೆ ಆರ್ಥಿಕವಾಗಿ ಸಧೃಡವಾಗಿದ್ದರು ಎನ್ನಲಾಗುತ್ತಿರುವ ಗೋಪಾಲಕೃಷ್ಣ ರೈ ಇವರು ಇತ್ತೀಚೆಗೆ ಬಂಗಲೆಯಂತಹ ಮನೆಯನ್ನು ನಿರ್ಮಿಸಿ, ಸಂತೋಷದಿಂದ ಸಂಸಾರಿಕ ಜೀವನವನ್ನು ನಡೆಸಿ, ಕುಟುಂಬದವರ ಜೊತೆಗೆ ಪ್ರವಾಸ ಮಾಡುವ ಯೋಚನೆಯನ್ನು ವ್ಯಕ್ತಪಡಿಸಿದ ಇವರು ಏಕಾಏಕಿಯಾಗಿ ಆತ್ಮಹತ್ಯೆ ಗೈದಿರುವ ನಿಗೂಢ ವಿಚಾರ ಎಲ್ಲರನ್ನೂ ಬೆರಗಾಗುವಂತೆ ಮಾಡಿದೆ.