Shocking News! – LIC to end 23 Insurance Plans in January-2020!
ಶಾಕಿಂಗ್ ಸುದ್ದಿ ನೀಡಿದ LIC – ಜನವರಿ 2020 ರಲ್ಲಿ 23 ವಿಮಾ ಯೋಜನೆಗಳ ಅಂತ್ಯ!
LIC (Life Insurance Corporation Pvt Ltd) ಎಂಬ ಹೆಸರಿನ ಭಾರತೀಯ ಜೀವ ವಿಮಾ ಸಂಸ್ಥೆಯು ತನ್ನ ಭದ್ರ ಬುನಾದಿಯನ್ನು ಸ್ಥಾಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ LIC ಸಂಸ್ಥೆಯು ಇತ್ತೀಚೆಗೆ ಹಲವಾರು ವಿಚಾರಗಳಲ್ಲಿ ಚರ್ಚೆಯ ವಿಷಯವಾಗಿರುವುದನ್ನೂ ನಾವು ಗಮನಿಸಿದ್ದೇವೆ. ಇಂತಹದೇ ಇನ್ನೊಂದು ಪ್ರಮುಖ ಸುದ್ದಿಯೊಂದು ಈಗ LIC ಸಂಸ್ಥೆಯ ಬಗ್ಗೆ ಕೇಳಿ ಬರುತ್ತಿದೆ.
For ENGLISH content CLICK HERE.
ಬಡ್ಡಿದರ ಕುಸಿತ, ಸುಸ್ಥಿರ ರಿಟರ್ನ್ಸ್ ಸಲ್ಲಿಕೆ ಕಾರಣದಿಂದ ಜೀವನ್ ಅಕ್ಷಯ್ ಜನಪ್ರಿಯ ಯೋಜನೆ ಬಂದ್ ಆಗಿರುವುದು ಗೊತ್ತಿರಬಹುದು. ಈಗ ನಾನಾ ಕಾರಣಗಳಿಗಾಗಿ ಸುಮಾರು 23 ವಿಮೆ ಯೋಜನೆಗಳನ್ನು ಬಂದ್ ಮಾಡುತ್ತಿದೆ.
ವಿಮಾ ನಿಯಂತ್ರಣ ಸಂಸ್ಥೆಯ ಮಾರ್ಗದರ್ಶನದಲ್ಲಿ ಈ ಯೋಜನೆಗಳನ್ನು ಫೆಬ್ರವರಿ 1 ರಂದು ಹೊಸದಾಗಿ ಪ್ರಾರಂಭಿಸಲಾಗುವುದು, ಇತ್ತೀಚಿನ ಎಲ್ಐಸಿ ಹೊಸ ಜೀವನ್ ಆನಂದ್, ಜೀವನ್ ಉಮಾಂಗ್ ಯೋಜನೆಗಳನ್ನು ಕೊನೆಗೊಳಿಸಲಾಗುತ್ತದೆ. ಲಿಂಕ್ ಮಾಡದ ವೈಯಕ್ತಿಕ ವಿಮಾ ಯೋಜನೆ, ಯುನಿಟ್ ಲಿಂಕ್ಡ್ ವೈಯಕ್ತಿಕ ವಿಮಾ ಯೋಜನೆ, ಸೇರಿದಂತೆ ರೈಡರ್ ಪ್ಲಾನನ್ನು ಕೂಡಾ ನಿಲ್ಲಿಸಲಾಗುವುದು.
ಈ ಪಟ್ಟಿಯಲ್ಲಿ ಸಿಂಗಲ್ ಪ್ರೀಮಿಯಂ ಎಂಡೊವ್ಮೆಂಟ್ ಪ್ಲ್ಯಾನ್, ನ್ಯೂ ಎಂಡೊವ್ಮೆಂಟ್ ಪ್ಲ್ಯಾನ್, ನ್ಯೂ ಮನಿ ಬ್ಯಾಕ್ -20 years, ನ್ಯೂ ಜೀವನ್ ಆನಂದ್, ಅನ್ಮೋಲ್ ಜೀವನ್ 2, ಲಿಮಿಟೆಡ್ ಪ್ರೀಮಿಯಂ ಎಂಡೊವ್ಮೆಂಟ್ ಪ್ಲ್ಯಾನ್, ನ್ಯೂ ಚಿಲ್ಡ್ರನ್ ಮನಿ ಬ್ಯಾಕ್ ಪ್ಲ್ಯಾನ್, ಜೀವನ್ ಲಕ್ಷ್ಯ, ಜೀವನ್ ಗಯಾ, ಜೀವನ್ ತರುಣ್, ಜೀವನ್ ಲಾಭ್, ನ್ಯೂ ಜೀವನ್ ಮಂಗಳ್, ಭಾಗ್ಯಲಕ್ಷ್ಮಿ, ಆಧಾರ್ ಪಿಲ್ಲರ್, ಜೀವನ್ ಉಮಂಗ್, ಆಧಾರ್ ಶಿಲಾ, ಜೀವನ್ ಶಿರೋಮಣಿ, ಬೀಮಾ ಶ್ರೀ ಮತ್ತು ಮೈಕ್ರೋ ಸೇವಿಂಗ್ಸ್ ಸೇರಿವೆ. ಆದರೆ ಎಲ್ ಐಸಿ ಬಂದ್ ಮಾಡಿರುವ ಯೋಜನೆಗಳನ್ನು ಮತ್ತೊಮ್ಮೆ ಕಡಿಮೆ ಬಡ್ಡಿದರದೊಂದಿಗೆ ಪುನಃ ಮಾರುಕಟ್ಟೆಗೆ ತಂದರೂ ಅಚ್ಚರಿಯೇನಿಲ್ಲ.
ಜನವರಿ 31 ರ ಮೊದಲು ಈ ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಲು ಎಲ್ಐಸಿ ಏಜೆಂಟರು ಕ್ರಮೇಣ ಗ್ರಾಹಕರನ್ನು ಒತ್ತಾಯಿಸುತ್ತಿದ್ದಾರೆ ಮತ್ತು ಹೊಸ ಯೋಜನೆಗಳಿಂದ ಪ್ರೀಮಿಯಂಗಳು ಹೆಚ್ಚಾಗುವ ಸಾಧ್ಯತೆಗಲಿವೆ ಎಂದು ವರದಿಯಾಗಿದೆ.