For a better experience please change your browser to CHROME, FIREFOX, OPERA or Internet Explorer.
Are you using LPG? How can you save money on LPG usage? Here is a good news from Indian Oil Corporation.

Are you using LPG? How can you save money on LPG usage? Here is a good news from Indian Oil Corporation.

ಎಲ್ ಪಿ ಜಿ ಬಳಸುತ್ತಿದ್ದೀರಾ? ಗ್ಯಾಸ್ ಬಳಕೆಯಲ್ಲಿ ಹಣ ಹೇಗೆ ಉಳಿಸಬಹುದು. ಇಲ್ಲಿದೆ ಭಾರತೀಯ ತೈಲ ನಿಗಮದಿಂದ ಭರ್ಜರಿ ಸಿಹಿ ಸುದ್ದಿ.

ಮನೆಗೆ ಸಿಲಿಂಡರ್ ಪೂರೈಸುವ ಸಿಬ್ಬಂದಿಗೆ ಡೆಲಿವರಿ ಶುಲ್ಕ ನೀಡಬೇಕೆ? ನಮಗೆ ಪೂರೈಸಿದ ಸಿಲಿಂಡರ್ ಎಷ್ಟು ಸುರಕ್ಷಿತವಾಗಿದೆ? ಇಂತಹ ಕೆಲವೊಂದು ಪ್ರಶ್ನೆಗಳು ಗ್ರಾಹಕರ ಮನಸ್ಸಿನಲ್ಲಿ ಮೂಡುವುದು ಸಹಜ.

ಇಲ್ಲಿದೆ ನಿಮ್ಮ ಈ ಪ್ರಶ್ನೆಗಳಿಗೆ ಉತ್ತರ.

For ENGLISH content CLICK HERE.

ಬೆಲೆಯಲ್ಲಿಯೇ ಗ್ಯಾಸ್ ಸಿಲಿಂಡರ್ ಮತ್ತು ವಿತರಣಾ ಶುಲ್ಕವನ್ನು ಗ್ರಾಹಕರಿಂದ ಪಡೆದುಕೊಂಡಿರುತ್ತೇವೆ. ಆದ್ದರಿಂದ ಮನೆ ಬಾಗಿಲಲ್ಲಿ ಸಿಲಿಂಡರ್ ಪೂರೈಸುವ ವೇಳೆ ಗ್ರಾಹಕರಿಂದ ವಿತರಕರು ಹೆಚ್ಚಿನ ಶುಲ್ಕ ಪಡೆಯುವಂತಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಓಸಿ) ತಿಳಿಸಿದೆ.

ಭಾರತದಾದ್ಯಂತ 12 ಸಾವಿರ ವಿತರಕರು, ೬೪ ಸಾವಿರ ಪೂರೈಕೆದಾರರು ಮತ್ತು 12.5 ಕೋಟಿ ಗ್ರಾಹಕರನ್ನು ಹೊಂದಿರುವ ಐಓಸಿ ಪ್ರತಿದಿನ ಸುಮಾರು 30 ಲಕ್ಷ ಗ್ಯಾಸ್ ಸಿಲಿಂಡರ್ ಗಳನ್ನು ಪೂರೈಸುತ್ತದೆ. ಗ್ರಾಹಕರಿಂದ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ಐಓಸಿ ಸಂಸ್ಥೆ 24×7 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ತುರ್ತು ಸಂಖ್ಯೆ 1906 ರ ಮೂಲಕ ಗ್ರಾಹಕರ ದೂರುಗಳಿಗೆ ಸ್ಪಂದಿಸುತ್ತಿದೆ.

ವಿತರಣಾ ಸಂಸ್ಥೆ ಎಲ್‌ಪಿಜಿ ಸಿಲಿಂಡರ್‌ಗಳನ್ನು 5 ಕಿ.ಮೀ ವರೆಗೆ ಉಚಿತವಾಗಿ ತಲುಪಿಸಬೇಕು. ನಿಯಮಾವಳಿಗಳ ಪ್ರಕಾರ, 5-10 ಕಿ.ಮೀ.ವರೆಗಿನ ವಿತರಣೆಗೆ 20 ರೂ. ಮತ್ತು 10-15 ಕಿ.ಮೀ.ಗೆ 25 ರೂ. 15 ಕಿ.ಮೀ ಮೀರಿದ ವಿತರಣಾ ಶುಲ್ಕ 30 ರೂ ಆಗಿರಬೇಕು. ವಿತರಣಾ ಶುಲ್ಕವನ್ನು ಸಹ ಬಿಲ್‌ನಲ್ಲಿ ದಾಖಲಿಸಬೇಕು.

ಸಿಲಿಂಡರ್ ವಿತರಕರು ಸಿಲಿಂಡರ್ ನ ತೂಕ, ಸೋರಿಕೆ ಮತ್ತು ವಾಲ್ಟ್ ಸೋರಿಕೆ ಸೇರಿದಂತೆ ಸುರಕ್ಷತೆಯ ಅಂಶಗಳನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸಿ ಸಿಲಿಂಡರ್ ವಿತರಿಸುವಂತೆ ಖಡಕ್ ಆದೇಶವನ್ನು ಹೊರಡಿಸಿದೆ.

ಎಲ್ ಪಿಜಿ ಸಂಬಂಧ ಏನಾದರೂ ಸಮಸ್ಯೆಗಳಿದ್ದರೆ 1906 ಅಥವಾ 18002333555ಕ್ಕೆ ಕರೆ ಮಾಡಿ ದೂರು ನೀಡಬಹುದು ಎಂದು ಐಒಸಿ ಪ್ರಕಟಣೆಯಲ್ಲಿ ತಿಳಿಸಿದೆ.

1 2

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts