Catholic Sabha Mogarnad Deanary hosts Sports Festival.
ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ), ಮೊಗರ್ನಾಡು ವಲಯದ ಕ್ರೀಡೋತ್ಸವ ವು ಕಧೋಲಿಕ್ ಸಭಾ ಮೊಗರ್ನಾಡ್ ಘಟಕ ಹಾಗೂ ದೇವಮಾತ ಯುವಸಂಚಾಲನದ ಸಹಯೋಗದಲ್ಲಿ 03.11.2019 ರಂದು ದೇವಮಾತ ಶಾಲೆ, ಅಮ್ಟೂರು ಇದರ ಮೈದಾನಲ್ಲಿ ಜರುಗಿತು.
For ENGLISH content CLICK HERE.
ಕಧೋಲಿಕ್ ಸಭಾ ಮೊಗರ್ನಾಡ್ ಘಟಕದ ಅಧ್ಯಕ್ಷ ಶ್ರೀ ಅಜಯ್ ಪಾಯ್ಸ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದೇವಮಾತ ದೇವಾಲಯ ಮೊಗರ್ನಾಡ್ ಇದರ ಸಹಾಯಕ ಧರ್ಮಗುರುಗಳಾದ ವಂದನೀಯ ಫಾ| ದೀಪಕ್ ಡೆಸಾ ಕ್ರೀಡೆಯ ಮಹತ್ವದ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಕಥೋಲಿಕ್ ಸಭಾ ಮಂಗಳೂರು ಪ್ರದೇಶದ ರಾಜಕೀಯ ಸಂಚಾಲಕ ಶ್ರೀ ಎಲಿಯಾಸ್ ಡಿಸೋಜ, ಕಥೋಲಿಕ್ ಸಭಾ ಮೊಗರ್ನಾಡ್ ವಲಯ ಅಧ್ಯಕ್ಷ ಶ್ರೀ ಆಂಟನಿ ಡಿಸೋಜ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶ್ರೀಮತಿ ಜಾನೆಟ್ ವಾಸ್, ದೇವಮಾತ ಯುವಸಂಚಾಲನದ ಅಧ್ಯಕ್ಷ ಶ್ರೀ ಮೆಲ್ವಿನ್ ಡಿಕುನ್ಹಾ,ಹಾಗೂ ವಿಟ್ಲ ಹಾಗೂ ಶಂಭೂರ್ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು. ಖಜಾಂಚಿ ಶ್ರೀ ಮ್ಯಾಕ್ಸಿಂ ಪಿಂಟೊ ಧನ್ಯವಾದ ಸಮರ್ಪಿಸಿದರು. ಕುಮಾರಿ ರೇಶ್ಮಾ ಡಿಕುನ್ಹಾ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ವಿಭಾಗಗಳಲ್ಲಿ ಆಟೋಟಗಳನ್ನು ಏರ್ಪಡಿಸಲಾಗಿತ್ತು. 100 ಮೀ, 200 ಮೀ, 400 ಮೀ, ಗುಂಡೆಸತ, ಉದ್ದಜಿಗಿತ, ರಿಲೇ, ವಾಲಿಬಾಲ್, ಥ್ರೋಬಾಲ್ ಮುಂತಾದ ಆಟಗಳು ಜರುಗಿದವು.
2019-20 ನೇ ವರ್ಷವನ್ನು ಯುವಜನರಿಗಾಗಿ ಸಮರ್ಪಿಸಿದ ಕಥೋಲಿಕ್ ಸಮುದಾಯವು ಯುವಜನರ ವರ್ಷದ ಅಂಗವಾಗಿ ದಿನಾಂಕ 17.11.2019 ರಂದು ಮಂಗಳೂರು ಧರ್ಮಪ್ರಾಂತ್ಯದ ಪ್ರಾಂತೀಯ ವಲಯ ಮಟ್ಟದಲ್ಲಿ ನಡೆಯಲಿರುವ ಕ್ರೀಡಾಕೂಟದ ಅಂಗವಾಗಿ ಈ ಕ್ರೀಡಾಕೂಟವು ಜರಗಿತು. ವಲಯ ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು ಪ್ರಾಂತೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ದೇವಮಾತ ದೇವಾಲಯ ಮೊಗರ್ನಾಡ್ ಇದರ ಗುರುಗಳಾದ ವಂದನೀಯ ಡಾ| ಫಾ| ಮಾರ್ಕ್ ಕ್ಯಾಸ್ತೆಲಿನೊ, ಸೋಲೇ ಗೆಲುವಿನ ಸೋಪಾನ, ಗೆಲುವು ಮುಖ್ಯವಲ್ಲ, ಪಾಲ್ಗೊಳ್ಳುವಿಕೆ ಮುಖ್ಯ ಎಂದು ವಿಜೇತರನ್ನು ಮತ್ತು ಕ್ರೀಡೆಯಲ್ಲಿ ಪಾಲ್ಗೊಂಡ ಕ್ರೀಡಾಪಟುಗಳನ್ನು ಅಭಿನಂದಿಸಿದರು.
ಧರ್ಮಪ್ರಾಂತ್ಯದ ಮಟ್ಟದ ಕ್ರಿಡೋತ್ಸವಕ್ಕಾಗಿ ನಡೆದ ಆಯ್ಕೆ ಪ್ರಕ್ರಿಯೆಯ ವಿಜೇತರು:
ವಿಭಾಗ 1: 18 -30 (ಹುಡುಗರು)
100 ಮೀಟರ್ ಓಟ:
- ಜ್ಯಾಕ್ಸನ್ ಪಿರೇರಾ – ಶಂಭೂರು
- ಪ್ರದೀಪ್ ಡಿಸೋಜಾ – ಪೆರುವಾಯಿ
200 ಮೀಟರ್ ಓಟ:
- ಅವಿಲ್ ಫೆರ್ನಾಂಡಿಸ್ – ಶಂಭೂರು..
- ಎಲ್ವಿನ್ ಬರ್ಬೋಜಾ – ಮೊಗರ್ನಾಡ್
400 ಮೀಟರ್ ಓಟ:
- ರೋಯ್ಸನ್ ಮೊಂತೇರೋ – ಮೊಗರ್ನಾಡ್
- ಮೆಲ್ವಿನ್ ಪಾಯ್ಸ್ – ಶಂಭೂರ್
ಗುಂಡೆಸೆತ:
- ನಿತಿನ್ ಮೊಂತೇರೊ – ಮೊಗರ್ನಾಡ್
- ವಿನ್ಸೆಂಟ್ ರೇಗೊ – ಮೊಗರ್ನಾಡ್
ಉದ್ದ ಜಿಗಿತ:
- ಜ್ಯಾಕ್ಸನ್ ಪಿರೇರಾ – ಶಂಭೂರ್
- ರೋಯ್ಸನ್ ಮೊಂತೇರೋ – ಮೊಗರ್ನಾಡ್
ರಿಲೇ:
- ಶಂಭೂರ್
- ಮೊಗರ್ನಾಡ್
ವಿಭಾಗ 1: 18 -30 (ಹುಡುಗಿಯರು)
100 ಮೀಟರ್ ಓಟ:
- ಸೀಮಾ ಪಿಂಟೊ – ಶಂಭೂರ್
- ಜೋಸ್ಲಿನ್ ಪಿಂಟೊ – ಬರಿಮಾರ್
200 ಮೀಟರ್ ಓಟ:
- ಪ್ರಿಯಾಂಕ ಪಾಯ್ಸ್ – ವಿಟ್ಲ
- ವಿಲ್ಮಾ ಪಿಂಟೊ – ಶಂಭೂರ್
400 ಮೀಟರ್ ಓಟ:
- ಸುಷ್ಮಾ ವೀರಾ ಅಂದ್ರಾದೆ – ಮೊಗರ್ನಾಡ್
- ಜೆನಿಷಾ ಪಿರೇರಾ – ಶಂಭೂರ್
ಗುಂಡೆಸೆತ:
- ಸುಷ್ಮಾ ವೀರಾ ಅಂದ್ರಾದೆ – ಮೊಗರ್ನಾಡ್
- ಜಾಸ್ಮಿನ್ ವೇಗಸ್ – ವಿಟ್ಲ
ಉದ್ದ ಜಿಗಿತ:
- ಸೀಮಾ ಪಿಂಟೊ – ಶಂಭೂರ್
- ಜೆನಿಷಾ ಪಿರೇರಾ – ಶಂಭೂರ್
ವಿಭಾಗ 2 – (31 -45) (ಪುರುಷರು)
100 ಮೀಟರ್ ಓಟ:
- ಸುನಿಲ್ ಪಿಂಟೊ, ಮೊಗರ್ನಾಡ್
- ಲೂವಿಸ್ ಡಿಸೋಜ, ಮೊಗರ್ನಾಡ್
ಗುಂಡೆಸೆತ:
- ವಿಲ್ಫ್ರೆಡ್ ವೇಗಸ್, ವಿಟ್ಲ
- ಮ್ಯಾಕ್ಸಿಮ್ ಪಿಂಟೊ, ಮೊಗರ್ನಾಡ್
ಉದ್ದ ಜಿಗಿತ:
- ಪ್ರಶಾಂತ್ ತೋರಸ್ – ಮೊಗರ್ನಾಡ್
- ವಿಲ್ಫ್ರೆಡ್ ವೇಗಸ್, ವಿಟ್ಲ
ವಿಭಾಗ 2 – (31 -45) (ಮಹಿಳೆಯರು)
100 ಮೀಟರ್ ಓಟ:
- ಸಿಸಿಲಿಯಾ ಪಿಂಟೊ – ಶಂಭೂರ್
- ಮೇರಿ ಲೋಬೊ – ಶಂಭೂರ್
ಗುಂಡೆಸೆತ:
- ವಿಲ್ಮಾ ಪಾಯ್ಸ್, ವಿಟ್ಲ
- ಪ್ರಿಯಾಂಕ ಡಿಸೋಜ, ಮೊಗರ್ನಾಡ್
ಉದ್ದ ಜಿಗಿತ:
- ವಿಲ್ಮಾ ಪಾಯ್ಸ್, ವಿಟ್ಲ
- ಸಿಸಿಲಿಯಾ ಪಿಂಟೊ – ಶಂಭೂರ್
ವಿಭಾಗ – 3 (45-60) (ಪುರುಷರು)
100 ಮೀಟರ್ ಓಟ:
- ಎಡ್ವಿನ್ ರೊಡ್ರಿಗಸ್ – ವಿಟ್ಲ
- ಮ್ಯಾಕ್ಸಿಂ ಲೋಬೊ – ಶಂಭೂರ್
ಗುಂಡೆಸೆತ:
- ಎಡ್ವಿನ್ ರೊಡ್ರಿಗಸ್ – ವಿಟ್ಲ
- ರಿಚರ್ಡ್ ಡಿಕುನ್ಹಾ – ಮೊಗರ್ನಾಡ್
ವಿಭಾಗ – 3 (45-60) (ಮಹಿಳೆಯರು)
100 ಮೀಟರ್ ಓಟ:
- ರೇನು ಪಾಯ್ಸ್ – ವಿಟ್ಲ
- ಫ್ಲೋರಿನ್ ಪಿರೇರಾ – ಶಂಭೂರ್
ಗುಂಡೆಸೆತ:
- ಆಲಿಸ್ ಪಾಯ್ಸ್ – ವಿಟ್ಲ
- ಫ್ಲೋರಿನ್ ಪಿರೇರಾ – ಶಂಭೂರ್
ವಾಲಿಬಾಲ್:
- ವಿಟ್ಲ
- ಮೊಗರ್ನಾಡ್
ತ್ರೋಬಾಲ್:
- ವಿಟ್ಲ
- ಶಂಭೂರ್
Photo Courtesy: Roshan Mogarnad Photography.