For a better experience please change your browser to CHROME, FIREFOX, OPERA or Internet Explorer.
ಅಂಚೆ ಕಚೇರಿ ಉಳಿತಾಯ ಖಾತೆ ಗ್ರಾಹಕರಿಗೆ ಸಿಹಿ ಸುದ್ದಿ.

ಅಂಚೆ ಕಚೇರಿ ಉಳಿತಾಯ ಖಾತೆ ಗ್ರಾಹಕರಿಗೆ ಸಿಹಿ ಸುದ್ದಿ.

ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಇದೊಂದು ಸಿಹಿ ಸುದ್ದಿ. ಗ್ರಾಹಕ ಸ್ನೇಹಿಯಾಗಿ ಉಳಿತಾಯ ಖಾತೆದಾರರಿಗೆ ಮೊಬೈಲ್‌ ಬ್ಯಾಂಕಿಂಗ್‌ ಸೌಲಭ್ಯವನ್ನು ಅಂಚೆ ಇಲಾಖೆ ಕಲ್ಪಿಸಿದೆ. ಅಕ್ಟೋಬರ್ 15, 2019 ರಿಂದ ಎಲ್ಲಾ ಉಳಿತಾಯ ಖಾತೆಗಳ ಗ್ರಾಹಕರಿಗೆ ಈ ಸೇವೆ ಆರಂಭಿಸಿದೆ.

ದೇಶದ ಎಲ್ಲಾ ಸಿಬಿಎಸ್ ‌(ಕೋರ್‌ ಬ್ಯಾಂಕಿಂಗ್‌ ಸಲ್ಯೂಷನ್ಸ್‌) ಅಂಚೆ ಕಚೇರಿಗಳಲ್ಲಿನ ಉಳಿತಾಯ ಖಾತೆಗಳ ಗ್ರಾಹಕರು ಮೊಬೈಲ್‌ ಬ್ಯಾಂಕಿಂಗ್‌ ಸೇವೆ ಪಡೆಯಬಹುದಾಗಿದೆ. ಉಳಿತಾಯ ಖಾತೆದಾರರಿಗೆ ಇಂಟರ್ನೆಟ್‌ ಬ್ಯಾಂಕಿಂಗ್‌ ಸೌಲಭ್ಯ ನೀಡಿದ ಒಂದು ವರ್ಷದ ಬಳಿಕ, ಮೊಬೈಲ್‌ ಸೇವೆಯನ್ನು ಅಂಚೆ ಇಲಾಖೆ ಈಗ ಒದಗಿಸಿದೆ.

ಉಳಿತಾಯ ಖಾತೆ, ಆರ್‌ಡಿ, ಎಲ್‌ಎಆರ್‌ಡಿ, ಟಿಡಿ, ಪಿಪಿಎಫ್‌, ಪಿಪಿಎಫ್‌ ಮತ್ತು ಎನ್‌ಎಸ್‌ಸಿಗೆ ಸಂಬಂಧಿಸಿದ ಸಾಲಗಳು – ಈ ಎಲ್ಲಾ ವಿವರಗಳನ್ನು ಮೊಬೈಲ್‌ ಬ್ಯಾಂಕಿಂಗ್‌ ಮೂಲಕ ತಿಳಿಯಬಹುದು. ಮಿನಿ ಸ್ಟೇಟ್‌ಮೆಂಟ್‌ ಸಹ ಪಡೆಯಬಹುದು. ಹಣ ವರ್ಗಾವಣೆ ಮಾಡಬಹುದು. ಆರ್‌ಡಿ, ಟಿಡಿ(ಟೈಮ್‌ ಡೆಪಾಸಿಟ್‌) ತೆರೆಯಬಹುದು. ಉಳಿತಾಯ ಖಾತೆಯಲ್ಲಿನ ಹಣವನ್ನು ಪಿಪಿಎಫ್‌, ಆರ್‌ಡಿಗೆ ವರ್ಗಾಯಿಸಬಹುದು.

ಯಾರಿಗೆ ಮೊಬೈಲ್‌ ಬ್ಯಾಂಕಿಂಗ್‌ ಸೌಲಭ್ಯ ಲಭ್ಯ?

ಸಿಬಿಎಸ್‌ ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ ಹೊಂದಿರಬೇಕು.

ಗ್ರಾಹಕರು ಇಂಟರ್‌ನೆಟ್‌ ಬ್ಯಾಂಕಿಂಗ್‌ನ ಲಾಗಿನ್‌ ಮತ್ತು ವಹಿವಾಟಿಗೆ ಅಗತ್ಯವಾದ ಅಂಶಗಳನ್ನು ಹೊಂದಿರಬೇಕು.

ಮೊಬೈಲ್‌ ಬ್ಯಾಂಕಿಂಗ್‌ ಬಯಸುವ ಗ್ರಾಹಕರು, ಮೊದಲು ಇಂಟರ್‌ನೆಟ್‌ ಬ್ಯಾಂಕ್‌ ಆಯ್ಕೆಯನ್ನು ಬಳಸಬೇಕು.

ಒಂಟಿ ಅಥವಾ ಜಂಟಿ ಬಿ ಖಾತೆ ಮಾದರಿಯ ಗ್ರಾಹಕರಿಗೂ ಲಭ್ಯ.

ಜಂಟಿ ‘ಎ’ ಮೈನರ್‌, ಅನಕ್ಷರರಿಗೆ ಈ ಸೌಲಭ್ಯ ಇಲ್ಲ.

ಏನೇನು ಬೇಕು?

ಇ-ಮೇಲ್‌ ಐಡಿ

ಪ್ಯಾನ್‌

ಮೊಬೈಲ್‌ ನಂಬರ್‌

ಸಿಐಎಫ್‌ ಐಡಿ ಅಥವಾ ಕಸ್ಟಮರ್‌ ಐಡಿ (ಗ್ರಾಹಕರ ಪಾಸ್‌ಬುಕ್‌ನ ಮೊದಲ ಪುಟದಲ್ಲಿ ಮುದ್ರಿಸಲಾಗಿರುತ್ತದೆ) ಅಗತ್ಯ.

ಜನ್ಮದಿನಾಂಕ, ಪ್ಯಾನ್‌ ನಂಬರ್‌, ಮೊಬೈಲ್‌ ನಂಬರ್‌, ತಂದೆ ಹೆಸರು, ಲಿಂಗ, ಸೂಕ್ತ ವಿಳಾಸದ ದೃಢೀಕರಣದ ದಾಖಲೆ, ಪ್ರಸ್ತುತ ವಾಸದ ವಿಳಾಸದ ದಾಖಲೆ ಅಗತ್ಯ.

ಅಪ್ಲೈ ಮಾಡುವುದು ಹೇಗೆ?

ಅರ್ಹ ಗ್ರಾಹಕರು ಸಿಬಿಎಸ್‌ ಹೆಡ್‌/ಸಬ್‌ ಅಂಚೆ ಕಚೇರಿಗೆ ತೆರಳಿ (ಶಾಖೆ ಕಚೇರಿಗಳಲ್ಲ) ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬೇಕು. ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಅರ್ಜಿ ಸಲ್ಲಿಸಿದ 24 ಗಂಟೆಗಳಲ್ಲಿ ಮೊಬೈಲ್‌ ಬ್ಯಾಂಕಿಂಗ್‌ ಸೌಲಭ್ಯ ಲಭ್ಯವಾಗಲಿದೆ. ಬಳಿಕ ಗೂಗಲ್‌ ಪೇ ಸ್ಟೋರ್‌ ನಲ್ಲಿ ಇಂಡಿಯಾ ಪೋಸ್ಟ್‌ ಮೊಬೈಲ್‌ ಬ್ಯಾಂಕಿಂಗ್‌ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.

ನಿಮ್ಮ ಸಿಐಎಫ್‌ (CIF) ಐಡಿಯೇ User ID ಆಗುತ್ತದೆ. ಇಂಟರ್‌ನೆಟ್‌ ಬ್ಯಾಂಕಿಂಗ್‌ಗೆ ಬಳಸುವ ಪಾಸ್‌ವರ್ಡ್‌, ಮೊಬೈಲ್‌ ಬ್ಯಾಂಕಿಂಗ್‌ನಲ್ಲಿ ಬಳಸಬಹುದು.

ಮೊಬೈಲ್‌ ಬ್ಯಾಂಕಿಂಗ್‌ ಬಗ್ಗೆ ದೂರುಗಳನ್ನು ನೀಡಲು ಟೋಲ್‌-ಫ್ರೀ ಸಂಖ್ಯೆ 1800 425 2440 ಬಳಸಬಹುದು. ಅಥವಾ ಇಮೇಲ್‌ ಕಳಿಸಿ [email protected]

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts