ಬ್ಯಾಂಕ್ ಗಳ ವಿಲೀನ – ಬರಲಿದೆ ಹಣದ ಅಭಾವ
ಇತ್ತೀಚಿನ ಬೆಳವಣಿಗೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಕೃತ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಯು ಜನಸಾಮಾನ್ಯರಲ್ಲಿ ಮಾತ್ರವಲ್ಲದೆ ಬ್ಯಾಂಕ್ ಉದ್ಯೋಗಿಗಳಲ್ಲೂ ಭಯದ ವಾತರಣವನ್ನು ಸೃಷ್ಟಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ನಡೆದ ಬ್ಯಾಂಕ್ ಆಫ್ ಬರೋಡಾ ಮತ್ತು ವಿಜಯ ಬ್ಯಾಂಕ್ ಗಳ ವಿಲೀನ, ಎರಡನೇ ಹಂತದಲ್ಲಿ ನಡೆದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕುಗಳ ವಿಲೀನ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಕೆಲವು ರಾಷ್ಟ್ರೀಕೃತ ಬ್ಯಾಂಕ್ ಗಳ ವಿಲೀನ ನಡೆಯುವುದು ಎಂಬ ವದಂತಿ ಹರಡುತ್ತಿದ್ದು, ಬ್ಯಾಂಕ್ ಉದ್ಯೋಗಿಗಳು ತಮ್ಮ ಉದ್ಯೋಗ ಹಾಗೂ ಹಿತವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಮುಷ್ಕರದ ಹಾದಿಯನ್ನು ಹಿಡಿಯುವುದು ಅನಿವಾರ್ಯವಾಗಿದೆ.
ಸಾರ್ವಜನಿಕ ವಲಯದ ಸುಮಾರು 10 ಬ್ಯಾಂಕ್ ಗಳ ವಿಲೀನೀಕರಣವನ್ನು ವಿರೋಧಿಸಿ ಬ್ಯಾಂಕ್ ಉದ್ಯೋಗಿಗಳು ಸಪ್ಟೆಂಬರ್ 26, ಗುರುವಾರ ಮತ್ತು 27 ಶುಕ್ತವಾರ, 2019 ರಂದು ದೇಶಾಂದ್ಯಂತ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಸಪ್ಟೆಂಬರ್ 28, 4ನೇ ಶನಿವಾರದ ಪ್ರಯುಕ್ತ ಸರಕಾರಿ ರಜೆ ಹಾಗೂ ಸಪ್ಟೆಂಬರ್ 29, ಭಾನುವಾರ. ಈ ಕಾರಣಗಳಿಂದಾಗಿ ಸಪ್ಟೆಂಬರ್ ತಿಂಗಳ ಕೊನೇಯ ವಾರದಲ್ಲಿ ಎಲ್ಲಾ ಬ್ಯಾಂಕ್ ಗಳು ಸತತ 4 ದಿನಗಳ ವರೆಗೆ ಬಂದ್ ಪರಿಣಾಮವಾಗಿ ಎಟಿಎಮ್ ಗಳಲ್ಲೂ ಹಣದ ಕೊರತೆ ಉಂಟಾಗಬಹುದು. ಆದ್ದರಿಂದ ನಿಮ್ಮ ವ್ಯವಹಾರಕ್ಕೆ ಬೇಕಾದ ಹಣದ ವ್ಯವಸ್ಥೆಯನ್ನು ಸಕಾಲದಲ್ಲಿ ಮಾಡಿಕೊಳ್ಳಿ.