For a better experience please change your browser to CHROME, FIREFOX, OPERA or Internet Explorer.
ಸುಜ್ಜಾನನಿಧಿ ವಿದ್ಯಾರ್ಥಿ ವೇತನ – ಮಾಹಿತಿ ಪತ್ರ.

ಸುಜ್ಜಾನನಿಧಿ ವಿದ್ಯಾರ್ಥಿ ವೇತನ – ಮಾಹಿತಿ ಪತ್ರ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ವಿತರಿಸಲಾಗುವ ರಜತೋತ್ಸವ ಸುಜ್ಜಾನನಿಧಿ ಶಿಷ್ಯವೇತನದ ಮಾಹಿತಿ ಪತ್ರವು ಈ ಕೆಳಗಿನಂತಿದೆ.

ನಿಮ್ಮ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಈ ಕೆಳಗಿನ ಮಾಹಿತಿ ಪತ್ರದಲ್ಲಿ ಉತ್ತರ ಸಿಗಲಿದೆ. ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಹಾಯವಾಗುವ ಉದ್ದೇಶದಿಂದ ಈ ಮಾಹಿತಿಯನ್ನು ಹಂಚಿಕೊಂಡಿದ್ದೇವೆ.

ಈ ಮಾಹಿತಿಯು ನಿಮಗೆ ಅನ್ವಯವಾಗದಿದ್ದರೆ ಇತರರೊಂದಿಗೆ ಶೇರ್ ಮಾಡಿ ಅರ್ಹ ವಿದ್ಯಾರ್ಥಿಗಳ ಕೈ ಸೇರಿಸಿ.

ರಜತೋತ್ಸವ ಸುಜ್ಜಾನನಿಧಿ ಶಿಷ್ಯವೇತನ ಯೋಜನೆಯ ಮಾಹಿತಿ ಪತ್ರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಬೆಳ್ಳಿ ಹಬ್ಬದ ಆಚರಣೆಯ ಸವಿನೆನಪಿಗಾಗಿ, ಯೋಜನೆಯ ಪಾಲುದಾರ ಸ್ವ ಸಹಾಯ / ಪ್ರಗತಿ ಬಂಧು ಸಂಘಗಳ, ಆರ್ಥಿಕವಾಗಿ ಹಿಂದುಳಿದ ಸದಸ್ಯರ ಕುಟುಂಬದ ವಿದ್ಯಾರ್ಥಿಗಳ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ನೆರವಾಗಲು ಅಂದಿನ ಉಪರಾಷ್ಟ್ರಪತಿ ಶ್ರೀ ಬೈರೋನ್ ಸಿಂಗ್ ಶೇಖಾವತ್ ರವರು 2007 ರಲ್ಲಿ ಸುಜ್ಜಾನನಿಧಿ ಶಿಷ್ಯವೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎರಡು ಮತ್ತು ಮೂರು ವರ್ಷದ ಅವಧಿಯ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ (ಕಾನೂನು ಹಾಗೂ ನರ್ಸಿಂಗ್ ಶಿಕ್ಷಣ ಸೇರಿ)

ಶಿಷ್ಯವೇತನ ರೂ.400/- ರಂತೆಯೂ, ಮೂರು ವರ್ಷಗಳಿಗೂ ಮೇಲ್ಪಟ್ಟ ಅವಧಿಗೆ ಮಾಸಿಕ ರೂ.1000/- ರಂತೆಯೂ, ಶಿಷ್ಯವೇತನವನ್ನು ಪಾವತಿಸಲಾಗುತ್ತಿದೆ.

ಕರ್ನಾಟಕ ರಾಜ್ಯದ್ಯಂತ ಇದುವರೆಗೂ 32,865 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡಿರುತ್ತಾರೆ. ಸದ್ರಿ ವಿದ್ಯಾರ್ಥಿಗಳಿಗೆ 43.00 ಕೋಟಿ ಶಿಷ್ಯವೇತನವನ್ನು ಈವರೆಗೆ ವಿತರಿಸಲಾಗಿದೆ.

ಪ್ರತಿ ವರ್ಷ ಸುಜ್ಜಾನನಿಧಿ ಶಿಷ್ಯವೇತನದ ಬಗ್ಗೆ ನಿರಂತರ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿತ್ತು. ಆದರೆ ಪ್ರಸ್ತುತ ವರ್ಷದಿಂದ ಅಂದರೆ 2019-2020 ನೇ ಸಾಲಿನ ಅರ್ಜಿ ನಮೂನೆ ಹಾಗೂ ಮಾಹಿತಿ ಪತ್ರವನ್ನು ಗ್ರಾಮಾಭಿವೃದ್ಧಿ ಯೋಜನೆಯ Website ನಲ್ಲಿ ಪ್ರಕಟಿಸಲಾಗಿದ್ದು, ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು www.skdrdpindia.org ನಿಂದ Download ಮಾಡಿಕೊಳ್ಳಬಹುದಾಗಿದೆ. ಬೇರೆ ಯಾವುದೇ ಕಡೆಗಳಲ್ಲಿ ಈ ಅರ್ಜಿಗಳು ಲಭ್ಯವಿರುವುದಿಲ್ಲ.

2019-2020 ನೇ ಸಾಲಿಗೆ ಸುಜ್ಜಾನನಿಧಿ ಶಿಷ್ಯವೇತನವನ್ನು ಪಡೆದುಕೊಳ್ಳಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

ವಿವರಗಳು:

  1. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿಸುತ್ತಿರುವ ಸ್ವ ಸಹಾಯ / ಪ್ರಗತಿ ಬಂಧು ತಂಡಗಳಲ್ಲಿ 30.06.2018 ಕ್ಕಿಂತ ಮೊದಲು ಪ್ರಾರಂಭಿಸಲಾದ ಸಂಘದ ಸದಸ್ಯರಾಗಿದ್ದು, ವ್ಯವಹಾರದಲ್ಲಿ ಎಸ್/ಎ/ಬಿ ಶ್ರೀಣಿಯಲ್ಲಿರುವ ಗುಂಪುಗಳ ಸದಸ್ಯರ ಮಕ್ಕಳು ಅರ್ಜಿ ಸಲ್ಲಿಸಬಹುದು. (ತಂದೆ ಅಥವಾ ತಾಯಿ ಕಡ್ಡಾಯವಾಗಿ ಸಂಘದ ಸದಸ್ಯರಾಗಿದ್ದಲ್ಲಿ ಮಾತ್ರ ಅವಕಾಶ)
  2. ಅರ್ಹ ಕುಟುಂಬಗಳ ಒಟ್ಟು ವಾರ್ಷಿಕ ಆದಾಯ (ಎಲ್ಲಾ ಮೂಲಗಳಿಂದ) ರೂ. 50,000.00 ಮೀರಬಾರದು.
  3. ವಿದ್ಯಾರ್ಹತೆ: ಅರ್ಹ ಮಕ್ಕಳು SSLC/PUC ಅಥವಾ ಕೋರ್ಸಿನ ಸೇರ್ಪಡೆಗೆ ನಿಗದಿಪಡಿಸಿದ ಪರೀಕ್ಷೆಗಳಲ್ಲಿ ಕನಿಷ್ಠ 75% (SC/ST ಗಳಿಗೆ 65%) ಅಂಕಗಳನ್ನು ಪಡೆದಿರಬೇಕು.
  • ITI, Lab Technician, Diploma, Agri Diploma (ಕಮರ್ಶಿಯಲ್ ಪ್ರಾಕ್ಟೀಸ್ ಹೊರತು ಪಡಿಸಿ) (SSLC ಪರೀಕ್ಷೆಯಲ್ಲಿ 75%)
  • E. MBBS, BAMS, BDS, BNYS, BVA, B,Tech, D.Tech. Psychotherapy , BHMS (Homeopathy) B.Sc Horticulture, B.Sc Agriculture, B.Sc Forestry (PUC ಪರೀಕ್ಷೆಯಲ್ಲಿ 75%)
  • LLB (PUC ಮಾಡಿ 5 ವರ್ಷ/ಯಾವುದೇ ಪದವಿ ಮಾಡಿ 3 ವರ್ಷ 75%)
  • MBA, B.Ed (ಪದವಿಯಲ್ಲಿ 75%)
  1. ಪ್ರಥಮ ವರ್ಷದ ಅಭ್ಯರ್ಥಿಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು.
  2. ಅರ್ಜಿಯಲ್ಲಿ ಗುಂಪಿನ ಸದಸ್ಯರ ಸಹಿ, ಮೇಲ್ವಿಚಾರಕ ಹಾಗೂ ಯೋಜನಾಧಿಕಾರಿಗಳ ಶಿಫಾರಸ್ಸು ಕಡ್ಡಾಯವಾಗಿರಬೇಕು.
  3. ಒಂದು ಕುಟುಂಬದಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಅವಕಾಶ ನೀಡಲಾಗುವುದು.
  4. ಶೇಕಡಾ 20 ರಷ್ಟು ವಿದ್ಯಾರ್ಥಿ/ನಿಗೆ ಕಡುಬಡವರಿಗೆ ಅಂದರೆ ವಾರ್ಷಿಕ ಆದಾಯ ಹಾಗೂ ಕುಟುಂಬದ ಪರಿಸ್ಥಿಯನ್ನು ಗಣನೆಗೆ ತೆಗೆದುಕೊಂಡು ವಿತರಿಸಲಾಗುವುದು.
  5. ಆಯ್ಕೆಯಾದ ವಿದ್ಯಾರ್ಥಿ/ನಿಯ ಹೆಸರಿನಲ್ಲಿ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ (ಕಳೆದ ಮೂರು ತಿಂಗಳಿನಿಂದ ಇತ್ತೀಚಿಗೆ ಸದ್ರಿ ಖಾತೆಯಲ್ಲಿ ವ್ಯವಹಾರ ನಡೆಸುತ್ತಿದ್ದು ಖಾತೆ ಚಾಲ್ತಿಯಲ್ಲಿರಬೇಕು) ಹೊಂದಿದವರಿಗೆ ಮಾತ್ರ ಅವಕಾಶ. ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿಗೆ ಬ್ಯಾಂಕ್ ವ್ಯವಸ್ಥಾಪಕರ ಸಹಿ ಮತ್ತು ಮುದ್ರೆಯನ್ನು ಕಡ್ಡಾಯವಾಗಿ ಹಾಕಿಸುವುದು.
  6. ಪ್ರಥಮ ಬಾರಿಯೇ ಆಯ್ಕೆಗೆ ಬೇಕಾದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿದ ನಂತರವೇ ಅರ್ಜಿಯ ಜೊತೆ ಕಳುಹಿಸಿ ಕೊಡುವುದು. ಅಗತ್ಯ ದಾಖಲೆಗಳು ಬಾಕಿ ಉಳಿದಲ್ಲಿ ಅಂತ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
  7. ಮೇಲ್ವಚಾರಕ ಹಾಗೂ ಯೋಜನಾಧಿಕಾರಿಗಳ ಶಿಫಾರಸ್ಸು ಕಡ್ಡಾಯವಾಗಿರಬೇಕು. ನೇರವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅನರ್ಹತೆ:

  1. ಶಿಷ್ಯವೇತನ ಪಡೆದ ನಂತರ ವಿನಾಕಾರಣ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡು ಮುಂದಿನ ತರಗತಿಗೆ ಹೋಗಲು ಅರ್ಹವಿಲ್ಲದ ಅಂತೆಯೇ ಶಿಕ್ಷಣವನ್ನು ಮಧ್ಯದಲ್ಲೇ ಕೈಬಿಟ್ಟು ಬೇರೆ ಶಿಕ್ಷಣಕ್ಕಾಗಲಿ, ಬೇರೆ ವೃತ್ತಿಗಾಗಲಿ ಸೇರುವ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿಯನ್ನು ಮುಂದುವರೆಸಲಾಗುವುದಿಲ್ಲ. ಹಾಗೂ ಇವರು ಈಗಾಗಲೇ ಪಡಕೊಂಡ ಸುಜ್ಞಾನ ನಿಧಿಯ ಶಿಷ್ಯವೇತನವನ್ನು ಮರಳಿಸಲು ಬದ್ಧರಾಗಿರುತ್ತಾರೆ.
  2. ಯೋಜನೆಯ ಕಾರ್ಯಕರ್ತರ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಲಭ್ಯವಿರುವುದಿಲ್ಲ.
  3. ಸುಜ್ಞಾನ ನಿಧಿ ಶಿಷ್ಯವೇತನವು ಪಿಯುಸಿ, ಪದವಿ, ಬಿಬಿಎಂ, ಬಿಸಿಎ ಇತ್ಯಾದಿ ಶಿಕ್ಷಣಕ್ಕೆ ಅನ್ವಯವಾಗುವುದಿಲ್ಲ. ಅರ್ಜಿ ನಮೂನೆಯಲ್ಲಿ ನಮೂದಿಸಿರುವ ಕೋರ್ಸ್ ಗಳಿಗೆ ಮಾತ್ರ ಅವಕಾಶ.
  4. ತಾಂತ್ರಿಕ, ವೃತ್ತಿಪರ ಕೋರ್ಸಿಗೆ ಒಂದು ಬಾರಿ ಶಿಷ್ಯವೇತನ ಪಡೆದವರು ಎರಡನೇ ಬಾರಿಗೆ ಇತರ ಕೋರ್ಸುಗಳ ಅಧ್ಯಯನಕ್ಕೆ ಶಿಷ್ಯವೇತನ ಪಡೆಯಲು ಅರ್ಹರಾಗಿರುವುದಿಲ್ಲ. (ಉದಾ: ಡಿ.ಎಡ್ ಪಡೆದು ಬಿ.ಎಡ್ ಗೆ ಶಿಷ್ಯವೇತನ ಪಡೆಯಲು ಅವಕಾಶವಿರುವುದಿಲ್ಲ. ಡಿಪ್ಲೋಮಾ ಶಿಷ್ಯವೇತನ ಪಡೆದು B.E ಗೆ ಶಿಷ್ಯವೇತನ ಪಡೆಯಲು ಪಡೆಯಲು ಅವಕಾಶವಿರುವುದಿಲ್ಲ. (ನೇರವಾಗಿ 2 ವರ್ಷಕ್ಕೆ ಸೇಪರ್ಡೆಗೊಳ್ಳುವುದರಿಂದ )
  5. ಅಂಚೆ ತೆರಪಿನ ಮೂಲಕ ಶಿಕ್ಷಣ ಪಡೆಯುವ ವಿದ್ಯಾರ್ಥಿ/ನಿಗಳಿಗೆ ಶಿಷ್ಯವೇತನ ಪಡೆಯಲು ಅವಕಾಶ ಇರುವುದಿಲ್ಲ.
  6. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಟ್ರಸ್ಟ್ ನೀಡುವ ಶಿಷ್ಯವೇತನ ಪಡೆಯುವ ವಿದ್ಯಾರ್ಥಿ/ನಿಗಳಿಗೆ ಸುಜ್ಜಾನನಿಧಿ ಶಿಷ್ಯವೇತನ ಪಡೆಯಲು ಅವಕಾಶ ಇರುವುದಿಲ್ಲ.
  7. ವಿದ್ಯಾರ್ಥಿ/ನಿಗಳು ಅರ್ಜಿಯನ್ನು ಭರ್ತಿ ಮಾಡಿ ಸ್ಥಳೀಯ ಯೋಜನಾ ಕಛೇರಿಗೆ ಈ ಕೆಳಗೆ ನಮೂದಿಸಿದ ದಿನಾಂಕದ ಒಳಗೆ ಕಳುಹಿಸಿಕೊಡುವುದು. ನಂತರ ಬಂದ ಅರ್ಜಿಗಳಿಗೆ ಅವಕಾಶ ಇಲ್ಲ.

 

ಕ್ರ. ಸಂ

ಕೋರ್ಸ್ ನ ಹೆಸರು

ಅರ್ಜಿ ಕಳುಹಿಸಲು ಕೊನೆಯ ದಿನಾಂಕ

1

B.Ed, Diploma, ITI, Lab Technician, LLB

30.08.2019

2

BDS, B.E, B.Pharma, B.sc(Fisheries), B.Sc Forestry, B.Sc Horiticulture, B.Sc Agriculture, B.Tech, BVA, BAMS, BHMS, BNYS, B.Sc, D.Ed, D.Pharm, MBA, MBBS, Nursing, Para Medical Science, Pharma.D, Physiotherapy

30.09.2019

ಶಿಷ್ಯವೇತನ ನವೀಕರಣ:

ಸುಜ್ಞಾನನಿಧಿ ಶಿಷ್ಯವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಮುಂದಿನ ವರ್ಷದ ಶಿಷ್ಯವೇತನವನ್ನು ಪಡೆಯಬೇಕಾದರೆ ಕೋರ್ಸ್ ಮುಗಿಯುವವರೆಗೆ ಪ್ರತೀ ವರ್ಷ ಈ ಕೆಳಗಿನ ದಾಖಲೆಗಳನ್ನು ನೀಡಬೇಕಾಗುತ್ತದೆ..

  1. ಸುಜ್ಞಾನನಿಧಿ ಶಿಷ್ಯವೇತನ ರಿನಿವಲ್ ಮಾಡಾಬೇಕಾದರೆ ಹಿಂದಿನ ವರ್ಷದ ಕೋರ್ಸಿನಲ್ಲಿ ಎಲ್ಲಾ ವಿಷಯಗಳಲ್ಲಿ ಪಾಸಾಗಿರಬೇಕು. ಹಾಗೂ ಪಾಸಾಗಿರುವ ಅಂಕಪಟ್ಟಿ ಪ್ರತಿ, ಸಂಬಂಧಪಟ್ಟ ಕಾಲೇಜಿನ ದೃಢೀಕರಣ ಪತ್ರ (Study Cerficate), ಕಾಲೇಜಿನಲ್ಲ ಫೀಸ್ ಕಟ್ಟಿರುವ ರಶೀದಿ ದೃಢೀಕೃತ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಲಗತ್ತಿಸುವುದು. ಎಲ್ಲಾ ರಿನಿವಲ್ ದಾಖಲೆಗಳಲ್ಲಿಯೂ ತಮ್ಮ ರಿಜಿಸ್ಟ್ರೇಶನ್ ನಂಬರ್, ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಕ್ಲಪ್ತ ಸಮಯದಲ್ಲಿ ಸಮುದಾಯ ಅಭಿವೃದ್ಧಿ ವಿಭಾಗಕ್ಕೆ ಕಳುಹಿಸುವುದು.
  2. ಪ್ರತೀ ವರ್ಷ ಎಲ್ಲಾ ಕೋರ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ದೃಢಪತ್ರದೊಂದಿಗೆ, ಕಾಲೇಜು ಫೀಸ್ ಕಟ್ಟಿದ ನಂತರ ಹಾಗೂ ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ ದೊರೆತ ನಂತರವೇ, ಯೋಜನಾ ಕಚೇರಿ ಮೂಲಕ ನವೀಕರಣಕ್ಕೆ ಕಳುಹಿಸಿಕೊಡುವುದು.
  3. ನವೀಕರಣ Format Website ನಲ್ಲಿ ಪ್ರಕಟಿಸಲಾಗಿದ್ದು, ಶಿಷ್ಯವೇತನವನ್ನು ನವೀಕರಣ ಮಾಡಲು ಬಯಸುವ ವಿದ್ಯಾರ್ಥಿಗಳು skdrdpindia.org ನಿಂದ ನವೀಕರಣ ಅರ್ಜಿಯನ್ನು Download ಮಾಡಿಕೊಳ್ಳಬಹುದಾಗಿದೆ. ಬೇರೆ ಯಾವುದೇ ಕಡೆಗಳಲ್ಲಿ ಈ ಅರ್ಜಿಗಳು ಲಭ್ಯವಿರುವುದಿಲ್ಲ.

ಹೆಚ್ಚಿನ ಮಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು – 08256-277488

ಧರ್ಮಸ್ಥಳ ಕ್ಷೇತ್ರದ ಅಧಿಕೃತ ವೆಬ್-ಸೈಟ್ ನಿಂದ ನೀವು ಅರ್ಜಿಗಳನ್ನು ಡೌನ್-ಲೋಡ್ ಮಾಡಿಕೊಳ್ಳಳು ಇಲ್ಲಿ ಕ್ಲಿಕ್ ಮಾಡಿ

ಆಥವಾ ಬಿ.ಸಿ.ರೋಡ್ ಬಂಟ್ವಾಳದಲ್ಲಿರುವ ನಮ್ಮ ಕಛೇರಿಯಿಂದ ಈ ಅರ್ಜಿ ಫಾರಂಗಳನ್ನು ಪಡೆದುಕೊಳ್ಳಬಹುದು.

ವಿಳಾಸ: Fobza, 2 ನೇ ಮಹಡಿ, ವಾಸುದೇವ ಪ್ಲಾಜಾ,  ಬಸ್-ಸ್ಟ್ಯಾಂಡ್ ಬಳಿ, ಬಿ.ಸಿ.ರೋಡ್, ಬಂಟ್ವಾಳ 574219

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts