ಉದ್ಯಮಗಳು ಅಭಿವೃದ್ಧಿ ಹೊಂದುತಿಲ್ಲ. ಯಾಕೆ ಗೊತ್ತೇ?
ನಿಮ್ಮ ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದೀರಾ?
ನಿಮ್ಮ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಬಯಸುತ್ತೀರಾ?
ಹಾಗಾದರೆ ಇಲ್ಲಿದೆ ಒಂದು ಉತ್ತಮ ಪರಿಹಾರ. www.fobza.com. ನಿಮ್ಮ ಅನುಕೂಲತೆಯ ಸಂಗಾತಿ.
ನಿಮಗಿದು ಗೊತ್ತೇ? ಲಕ್ಷ-ಕೋಟಿಗಟ್ಟಲೆ ಹಣವನ್ನು ವ್ಯವಹಾರದಲ್ಲಿ ಸುರಿದು, ಎಲ್ಲಾ ರೀತಿಯ ಸೇವೆಗಳನ್ನು ನೀಡುತ್ತಿದ್ದರೂ, ಇಂದು ಹಲವರ ಉದ್ಯಮಗಳು ಅಭಿವೃದ್ಧಿ ಹೊಂದುತಿಲ್ಲ. ಯಾಕೆ ಗೊತ್ತೇ? ಕಾರಣ ಇಷ್ಟೇ, ಜಾಹಿರಾತಿನ ಬಗ್ಗೆ ಮಾಲಕರಿಗೆ ಇರುವ ತಪ್ಪು ತಿಳುವಳಿಕೆ.
ಯಾವುದೇ ವ್ಯವಹಾರದ ಯಶಸ್ಸಿಗಾಗಿ ನಿಮ್ಮ ಉದ್ಯಮದ ಬಗ್ಗೆ ಜಾಹೀರಾತು ಮಾಡುವುದು ಅತ್ಯಾವಶ್ಯಕ. ನೀವು ನಡೆಸುತ್ತಿರುವ ಉದ್ಯಮದ ಬಗ್ಗೆ ಎಷ್ಟು ಜನರಿಗೆ ತಿಳಿದಿದೆ ಎಂಬುವುದರಲ್ಲಿ ಅಡಗಿದೆ ನಿಮ್ಮ ಉದ್ಯಮದ ಯಶಸ್ಸಿನ ಗುಟ್ಟು.
ಜಾಹೀರಾತಿಗಾಗಿ ವ್ಯಯಿಸಿದ ಹಣ ವ್ಯರ್ಥ ಎಂಬುವುದು ಹಲವರ ವಾದ. ನೆನಪಿಡಿ, ಯಾವುದೇ ಉದ್ಯಮ ಯಶಸ್ಸು ಕಾಣುವುದು ನೀವು ಮಾಡಿದ ಜಾಹೀರಾತಿನಿಂದ, ಇದಕ್ಕಾಗಿ ವ್ಯಯಿಸಿದ ಹಣ ಎಂದೂ ವ್ಯರ್ಥವಾಗದು, ಬದಲಾಗಿ ಮಾರುಕಟ್ಟೆಯಲ್ಲಿ ನೀವು ನಿಮ್ಮದೇ ಆದಂತಹ ಒಂದು ಹೆಸರು/ಕುರುಹನ್ನು (Brand) ಮಾಡುತ್ತೀರಿ. ಇದರಿಂದಾಗಿ ನಿಮ್ಮ ಉದ್ಯಮದ ಹೆಸರನ್ನು ತಿಳಿದಂತಹ ಗ್ರಾಹಕರು ಸುಲಭವಾಗಿ ನಿಮ್ಮ ಜೊತೆ ವ್ಯವಹಾರ ನಡೆಸಲು ಒಲವು ತೋರುತ್ತಾರೆ.
ಉದ್ಯಮ ಯಾವುದೇ ಇರಲಿ, ಸಣ್ಣ ಮಟ್ಟದ್ದು ಅಥವಾ ದೊಡ್ಡದು… ಅದರ ಬಗ್ಗೆ ಮಾಹಿತಿ ನೀಡಿದಾಗ ಮಾತ್ರ ಹೆಚ್ಚಿನ ಗ್ರಾಹಕರನ್ನು ಸೆಳೆದು, ನಿಮ್ಮ ಉದ್ಯಮವನ್ನು ಲಾಭದಾಯಕಗೊಳಿಸಲು ಸಾಧ್ಯ. ಉದ್ಯಮ ಕ್ಷೇತ್ರದ ಪ್ರಮುಖ ಬ್ರಾಂಡ್ ಗಳಲ್ಲಿ ಒಂದಾದ Pepsi, Coca Cola ಹೀಗೆ ಹಲವಾರು ಕಂಪೆನಿಗಳು ತಮ್ಮ ಜಾಹೀರಾತನ್ನು ಇನ್ನೂ ಮುಂದುವರೆಸುತ್ತಿವೆ . ಇದರ ಅರ್ಥ ಜಾಹಿರಾತಿಗಾಗಿ ವ್ಯಯಿಸಲು ಅವರ ಬಳಿ ಹಣ ಇದೆ ಅಥವಾ ಅವರಿಗೆ ವ್ಯವಹಾರದ ಕೊರತೆ ಇದೆ ಎಂದಲ್ಲ, ಬದಲಾಗಿ ನಾವು ಮಾರುಕಟ್ಟೆಯಲ್ಲಿ ಇನ್ನೂ ಸ್ಥಿರವಾಗಿದ್ದೇವೆ ಎಂದು.
ನಮ್ಮ ಉದ್ಯಮ ಸಣ್ಣದು, ಅದಕ್ಕೆ ಜಾಹೀರಾತು ಅಗತ್ಯವಿಲ್ಲ. ದೊಡ್ಡಮಟ್ಟಕ್ಕೆ ಬೆಳೆಯುವಾಗ ಇದರ ಬಗ್ಗೆ ಚಿಂತಿಸುವ ಎಂದು ಸುಮ್ಮನೆ ಕುಳಿತುಕೊಂಡರೆ, ಅದು ಮೂರ್ಖತನ ಎನ್ನಬಹುದು, ಯಾಕೆಂದರೆ, ಸಣ್ಣಮಟ್ಟದ ಉದ್ಯಮವನ್ನು ಸರಿಯಾಗಿ ಬೆಳೆಸಿದರೆ ಮಾತ್ರವಲ್ಲವೇ, ಅದು ದೊಡ್ಡಮಟ್ಟದ್ದಾಗಿ ಪ್ರಕಾಶಿಸಲು ಸಾಧ್ಯ? ಒಮ್ಮೆ ಚಿಂತಿಸಿ ನೋಡಿ!!!
ಜಾಹೀರಾತು!!! ಇದು ತುಂಬಾ ದುಬಾರಿಯಲ್ಲವೇ???
ಅಲ್ಲ ಎಂದು ನಾವು ವಾದಿಸುವುದಿಲ್ಲ. ಏಕೆಂದರೆ ಜಾಹೀರಾತಿನ ವೆಚ್ಚ ನೀವು ಆರಿಸಿಕೊಳ್ಳುವ ಜಾಹೀರಾತು ಮಾಧ್ಯಮ ಹಾಗೂ ನಿಮ್ಮ ಉದ್ಯಮದ ಗಾತ್ರದ ಮೇಲೆ ಅವಲಂಬಿಸಿರುತ್ತದೆ.
ಪ್ರಪಂಚದಲ್ಲಿ ತಂತ್ರಜ್ಞಾನ ಮುಂದುವರೆಯುತ್ತಿದ್ದಂತೆ ಅತ್ಯಂತ ಸುಲಭ, ವೇಗ ಹಾಗೂ ಕಡಿಮೆ ದರದಲ್ಲಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಮಾಹಿತಿ ರವಾನಿಸಲು ಹಲವಾರು ಮಾರ್ಗಗಳು ಉದ್ಭವಿಸುತ್ತವೆ. ಹಾಗಾಗಿ ಎಲ್ಲಾ ವರ್ಗದ ಉದ್ಯಮದ ಮಿತ್ರರನ್ನು ಒಟ್ಟುಗೂಡಿಸಿ, ಅಂತಜರ್ಾಲದಲ್ಲಿನ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿ ಉಚಿತವಾಗಿ* ಜಾಹೀರಾತು ಮಾಡಲು ಅವಕಾಶ ಮಾಡಿಕೊಟ್ಟು, ನಿಮ್ಮ ಉದ್ಯಮದಲ್ಲಿ ಅಭಿವೃದ್ಧಿ ಹೊಂದಲು ಹಾಗೂ ಎಲ್ಲಾ ಗ್ರಾಹಕ ಮಿತ್ರರಿಗೆ ಅವರ ಕೈಗೆಟಕುವ ಬೆಲೆಗಳಲ್ಲಿ ದೊರಕುವ ವಸ್ತು ಹಾಗೂ ಸೇವೆಗಳನ್ನು ನೀಡುವ ಉದ್ಯಮದವರನ್ನು ಪರಿಚಯಿಸಿಕೊಡುವ ಉದ್ದೇಶದಿಂದ ಹೊಸ ಜಾಹೀರಾತು ಯೋಜನೆಯೊಂದನ್ನು ಅನುಷ್ಟಾನಗೊಳಿಸುತ್ತಿದ್ದೇವೆ. ಅದೇ ನಿಮ್ಮ ಅನುಕೂಲತೆಯ ಸಂಗಾತಿ www.fobza.com
ಇದರಲ್ಲಿ ನೀವಾಗಿ ನಿಮ್ಮ ಉದ್ಯಮವನ್ನು ಜಾಹೀರಾತುಗೊಳಿಸಬಹುದು ಅಥವಾ ಜಾಹೀರಾತುಗೊಳಿಸುವುದಕ್ಕಾಗಿ ನಮ್ಮ ತಂಡಕ್ಕೆ ಈ ವಿಳಾಸಕ್ಕೆ ([email protected]) ಕಳುಹಿಸಿಕೊಡಬಹುದು. ನೀವು ನಮಗೆ ತಲುಪಿಸಿದ ಜಾಹೀರಾತನ್ನು ನಾವು ನಮ್ಮ ವೆಬ್ಸೈಟ್ www.fobza.com ನಲ್ಲಿ ಪ್ರಕಟಿಸುತ್ತೇವೆ. ಮಾತ್ರವಲ್ಲದೆ ನಮ್ಮ ಹೆಸರಿನಡಿ ಸಾಮಾಜಿಕ ಜಾಲತಾಣಗಳಾದ Facebook, Instagram, Twitter, LinkedIn, WhatsApp ಇತ್ಯಾದಿಗಳಲ್ಲಿರುವ ಖಾತೆಗಳಲ್ಲಿ ಪ್ರದಶರ್ಿಸುತ್ತೇವೆ. ಇದರಿಂದಾಗಿ ನಿಮ್ಮ ಉದ್ಯಮದ ಹೆಸರು ತುಂಬಾ ಜನರಿಗೆ ಬಹಳಷ್ಟು ವೇಗ ಹಾಗೂ ಪರಿಣಾಮಕಾರಿಯಾಗಿ ತಲುಪುತ್ತದೆ.
ಸೂಕ್ತ ಕೆಲಸದ ಹುಡುಕಾಟದಲ್ಲಿತುವ ಅಭ್ಯಥರ್ಿಗಳಿಗೆ ತಮ್ಮ ಕನಸಿನ ಉದ್ಯೋಗವನ್ನು ಹುಡುಕಲು, ಉದ್ಯಮಿಗಳಿಗೆ ತಮ್ಮ ಸಂಸ್ಥೆಯಲ್ಲಿನ ಉದ್ಯೋಗಾವಕಾಶಗಳನ್ನು ಘೋಷಿಸಿ ಉತ್ತಮ ಅಭ್ಯಥರ್ಿಗಳನ್ನು ಆಯ್ದುಕೊಳ್ಳಲು, ಉದ್ಯಮವನ್ನು ಜಾಹೀರಾತುಗೊಳಿಸಲು ಮತ್ತು ಸಾರ್ವಜನಿಕರಿಗೆ ತಮಗೆ ಅಗತ್ಯವಿಲ್ಲದ ವಸ್ತುಗಳನ್ನು ಮರುಮಾರಾಟ ಮಾಡಲು Fobza.com ಒಂದು ಉತ್ತಮ ಮತ್ತು ಅತ್ಯಂತ ಸರಳ ವೇದಿಕೆ.